ನಮ್ಮದು ಬಡ ಜನರೇ ತುಂಬಿರೋ ಧನಿಕ ದೇಶ – ಇದು ನಿತಿನ್ ಗಡ್ಕರಿ ಮಾತು


ಜಗತ್ತಿನಲ್ಲಿ ಭಾರತ (India) ದೇಶ ಐದನೇ ಅತಿದೊಡ್ಡ ಆರ್ಥಿಕ (World’s Fifth Economy)ವ್ಯವಸ್ಥೆಯಾಗಿ ಅವತರಿಸಿದೆ. ಭಾರತ ಧನಿಕ ದೇಶವಾಗಿ (India Rich country)ಬದಲಾಗಿದ್ದರೂ ಜನರು ಮಾತ್ರ ಬಡವರಾಗಿಯೇ (Poverty) ಇದ್ದಾರೆ ಎಂದು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ (Nitin Gadkari) ತಿಳಿಸಿದ್ದಾರೆ. ಬಡಜನರೆಲ್ಲಾ ಹಸಿವು (Starvation), ನಿರುದ್ಯೋಗ (unemployment), ಜಾತಿಯತೆ(Casteism), ಅಸ್ಪೃಷ್ಯತೆ (Untouchability ), ಹಣದುಬ್ಬರ (Inflation)ದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಗಡ್ಕರಿ ವ್ಯಾಖ್ಯಾನಿಸಿದ್ದಾರೆ.

ನಾಗ್ಪುರದಲ್ಲಿ (Nagpura)ಭಾರತ್ ವಿಕಾಸ್ ಪರಿಷತ್ (Bharat Vikas Parishat) ಎಂಬ ಸಂಸ್ಥೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ದೇಶದಲ್ಲಿ ಧನಿಕರು-ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಈ ಅಂತರವನ್ನು ತಗ್ಗಿಸುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಐದನೇ ಅತೀ ದೊಡ್ಡ ಆರ್ಥಿಕ ವ್ಯವಸ್ಥೆ ನಮ್ಮದು, ಬಡಜನರು (Poor people) ಇರುವ ಧನಿಕ ದೇಶ (rich country)ನಮ್ಮದು. ನಮ್ಮ ದೇಶ ಶ್ರೀಮಂತ ದೇಶ. ಆದರೆ, ಹಸಿವು, ನಿರುದ್ಯೋಗ, ಹಣದುಬ್ಬರ, ಬಡತನ, ಜಾತಿಯತೆ, ಅಸ್ಪೃಷ್ಯತೆಯಂತಹ ಅನೇಕ ಸಮಸ್ಯೆಗಳಿಂದ ಜನ ನೋವು ಅನುಭವಿಸಿದ್ದಾರೆ. ಇದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ’ ಎಂದಿದ್ದಾರೆ.

ಭಾರತೀಯ ಸಮಾಜದಲ್ಲಿ (Indian Society) ಸಾಮಾಜಿಕ, ಆರ್ಥಿಕ ಸಮಾನತೆಯನ್ನು (Socio Economic equality) ಸೃಷ್ಟಿ ಮಾಡುವ ಅಗತ್ಯವಿದೆ. ಸಮಾಜದಲ್ಲಿ ಎರಡು ವರ್ಗಗಳ ನಡುವಿನ ಅಂತರ ಹೆಚ್ಚುತ್ತಿದೆ. ಸಾಮಾಜಿಕ ಅಸಮಾನತೆಯಂತೆಯೇ (Social Inequality) ಆರ್ಥಿಕ ಅಸಮಾನತೆಯೂ ಹೆಚ್ಚುತ್ತಿದೆ ಎಂದು ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದಾರೆ.

ಶ್ರೀಮಂತ-ಬಡ ವರ್ಗದ ನಡುವೆ ಅಂತರವನ್ನು ಕಡಿಮೆ ಮಾಡಲು ಶಿಕ್ಷಣ(Education), ಆರೋಗ್ಯ ಸೇವಾ ರಂಗದಲ್ಲಿ (Health Services sector)ಕೃಷಿ ಮಾಡಬೇಕಾದ ತುರ್ತು ಅಗತ್ಯವಿದೆ.

ದೇಶದಲ್ಲಿ ಸಾಮಾಜಿಕವಾಗಿ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳ ದೃಷ್ಟಿಯಿಂದ ಹಿಂದುಳಿದ 124 ಜಿಲ್ಲೆಗಳ ಅಭಿವೃದ್ಧಿ ಮಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ಪಟ್ಟಣಗಳಿಗೆ ವಲಸೆ ತಪ್ಪಿಸಲು ಗ್ರಾಮೀಣ ಭಾಗದ ಸಬಲೀಕರಣಕ್ಕಾಗಿ ಭಾರತ್ ವಿಕಾಸ್ ಪರಿಷತ್‌ನಂತಹ ಸಂಸ್ಥೆಗಳು ಕೆಲಸ ಮಾಡಬೇಕೆಂದು ಗಡ್ಕರಿ ಮನವಿ ಮಾಡಿದ್ದಾರೆ.