BREAKING : ಕೊಲೆಯಾದ ಪ್ರವೀಣ್ ನೆಟ್ಟಾರು ಪತ್ನಿಗೆ ಸಿ ಗ್ರೂಪ್ ಹುದ್ದೆ – ಸರ್ಕಾರದ ಆದೇಶ

Praveen Nettaru

ಕೊಲೆ ಆದ Bjp ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಅವರ ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಗ್ರೂಪ್ ಸಿ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ.

115 ಖಾಯಂ ಮತ್ತು ತಾತ್ಕಾಲಿಕ ಹುದ್ದೆ ಭರ್ತಿ ಆಗಿರುವ ಕಾರಣ ಹೊಸದಾಗಿ 5 ತಾತ್ಕಾಲಿಕ ಹುದ್ದೆಗಳನ್ನು ಸೃಷ್ಟಿಸಿ ಆ ಹುದ್ದೆಯಲ್ಲಿ 1 ಹುದ್ದೆಯನ್ನು ಪ್ರವೀಣ್ ನೆಟ್ಟಾರು (Praveen Nettaru) ಪತ್ನಿ ಅವರಿಗೆ ನೀಡಲಾಗಿದೆ.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ : ಬಿಜೆಪಿ ಹೆಸರಲ್ಲಿ ಹಣ ಸಂಗ್ರಹ – ಸ್ಪಷ್ಟನೆ ನೀಡಿದ ಬಿಜೆಪಿ

ಮುಖ್ಯಮಂತ್ರಿ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಆಗಿರುವ ನೂತನ ಕುಮಾರಿ ತಿಂಗಳಿಗೆ 30,350 ರೂಪಾಯಿ ವೇತನ ಪಡೆಯಲಿದ್ದಾರೆ.

ನೇಮಕ ಆದ 2 ತಿಂಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.

ಇದನ್ನೂ ಓದಿ : BREAKING: ಪ್ರವೀಣ್​ ನೆಟ್ಟಾರು ಕೊಲೆ: ಮತ್ತೆ ಮೂವರು ಪ್ರಮುಖ ಆರೋಪಿಗಳ ಬಂಧನ