ಬಿಜೆಪಿ (BJP) ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಸಂಬಂಧ ಪೊಲೀಸರು ಮತ್ತೆ ಮೂವರು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
ಶಾಯಿಬ್, ರಿಯಾಜ್ ಮತ್ತು ಬಶೀರ್ ಬಂಧಿತ ಆರೋಪಿಗಳು. ಮೂವರಲ್ಲಿ ಇಬ್ಬರು ಸುಳ್ಯ (Sullia) ತಾಲೂಕಿನ ಬೆಳ್ಳಾರೆ ಮತ್ತು ಎಲಿಮಲೆಯವರು. ಓರ್ವ ಪುತ್ತೂರಿನವ (Putturu).
ಬಂಧಿತರನ್ನು ಸುಳ್ಯದಿಂದ ಮಂಗಳೂರಿಗೆ (Mangaluru) ಪೊಲೀಸರು ಕರೆದುಕೊಂಡು ಬರುತ್ತಿದ್ದಾರೆ.
ಈ ಮೂವರ ಬಂಧನದೊಂದಿಗೆ ಬೆಳ್ಳಾರೆ (Bellare) ಗ್ರಾಮದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿದೆ.
ADVERTISEMENT
ADVERTISEMENT