ADVERTISEMENT
ನಾಳೆ ಅಂದರೆ ಆಗಸ್ಟ್ 8ರ ಸೋಮವಾರದಿಂದ ಈ ಹಿಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ಗುಂಪು ಸೇರುವುದಕ್ಕೆ ಅವಕಾಶವಿಲ್ಲ.
ಮದ್ಯ ಮಾರಾಟಕ್ಕೂ ಹೇರಲಾಗಿದ್ದ ನಿರ್ಬಂಧವನ್ನೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ವಾಪಸ್ ಪಡೆದಿದ್ದು, ಮದ್ಯ ಮಾರಾಟ ನಾಳೆಯಿಂದ ಎಂದಿನಂತೆ ಇರಲಿದೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆಯ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಡಳಿತ 10 ದಿನಗಳಿಂದ ಜಿಲ್ಲೆಯಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಬಾರದು ಮತ್ತು ಮದ್ಯ ಮಾರಾಟ ನಿರ್ಬಂಧ ಹೇರಿ ಆದೇಶಿಸಿತ್ತು.
ADVERTISEMENT