BREAKING: ಆರೋಪ ಸಾಬೀತಾದ ಬೆನ್ನಲ್ಲೇ ಕೋರ್ಟ್​​ನಿಂದಲೇ ಓಡಿಹೋದ ಯೋಗಿ ಆದಿತ್ಯನಾಥ್​ ಸರ್ಕಾರದ ಸಚಿವ

ಉತ್ತರಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರಕ್ಕೆ ಈಗ ಮುಜುಗರದ ಮೇಲೆ ಮುಜುಗರ.

ಶಸ್ತ್ರಾಸ್ತ್ರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಕಾನ್ಪುರ ಜಿಲ್ಲೆಯ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್​​ ಸರ್ಕಾರದ ಸಣ್ಣ ಮತ್ತು ಮಧ್ಯಮಗಾತ್ರದ ಕೈಗಾರಿಕೆ ಸಚಿವ ರಾಕೇಶ್​ ಸಾಚಾನ್​ ಕೋರ್ಟ್​ನಿಂದಲೇ ಓಡಿಹೋಗಿರುವ ಬಗ್ಗೆ ದೂರು ಸಲ್ಲಿಕೆ ಆಗಿದೆ.

ಈ ಸಲದ ಚುನಾವಣೆಗೂ ಮೊದಲೂ ರಾಕೇಶ್​ ಕಾಂಗ್ರೆಸ್​ನಿಂದ ದೂರವಾಗಿ ಬಿಜೆಪಿ ಸೇರಿದ್ದರು.

ಶಿಕ್ಷೆಯ ಪ್ರಮಾಣ ಪ್ರಕಟವಾಗುದಕ್ಕೂ ಮೊದಲು ಸಚಿವರು ಓಡಿಹೋಗಿದ್ದಾರೆ ಎಂದು ವರದಿ ಆಗಿದೆ.

ಇತ್ತ ಮತ್ತೋರ್ವ ಸಚಿವ ಸಂಜಯ್​ ನಿಶಾದ್​​ ವಿರುದ್ಧ ಕೆಳ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್​ ಹೊರಡಿಸಿದ್ದು, ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಸೂಚಿಸಿದೆ.

ನಿಶಾದ್​ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಏಳು ವರ್ಷಗಳ ಹಿಂದೆ ನಡೆದಿದ್ದ ಪ್ರತಿಭಟನೆ ವೇಳೆ ಪೊಲೀಸರು ಮತ್ತು ನಿಶಾದ್​ ಪಕ್ಷದ ಕಾರ್ಯಕರ್ತರ ಜೊತೆಗೆ ಗಲಾಟೆ ಆಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಿರಂತರವಾಗಿ ಸಮನ್ಸ್​ ನೀಡಿದ್ದರೂ ಸಚಿವ ಸಂಜಯ್​ ನಿಶಾದ್​ ಹಾಜರಾಗಿರಲ್ಲ. ಈ ಹಿನ್ನೆಲೆಯಲ್ಲಿ ಈಗ ಗೋರಖ್​ಪುರದ ನ್ಯಾಯಾಲಯ ಜಾಮೀನುರಹಿತ ಬಂಧನದ ವಾರೆಂಟ್​ ಹೊರಡಿಸಿದೆ.

LEAVE A REPLY

Please enter your comment!
Please enter your name here