Big Breaking : ಮಲ್ಲಿಕಾರ್ಜುನ ಖರ್ಗೆಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಚುಕ್ಕಾಣಿ

Mallikarjun Kharge

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಐಸಿಸಿಯ (AICC) ಹೊಸ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಯ್ಕೆಯಾಗುವುದು ಖಚಿತವಾಗಿದೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ನ ಘಟಾನುಘಟಿ ನಾಯಕರೆಲ್ಲರೂ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿಗೆ ಸೂಚಕರಾಗಿ ಸಹಿ ಹಾಕಿದ್ದಾರೆ.

ಇದನ್ನೂ ಓದಿ : Congress Presidential Election : ರಾಜ್ಯದ ಮಲ್ಲಿಕಾರ್ಜುನ್ ಖರ್ಗೆ ನಾಮಪತ್ರ ಸಲ್ಲಿಕೆ – ಘಟಾನುಘಟಿಗಳ ಸಾಥ್

G23 ಗುಂಪಿನ ಪ್ರಮುಖರು ಕೂಡ ಖರ್ಗೆ ಹೆಸರಿಗೆ ಸೂಚಕರಾಗಿದ್ದಾರೆ.

ಅಂಬಿಕಾ ಸೋನಿ, ಅಶೋಕ್ ಗೆಹ್ಲೋಟ್, ಭೂಪಿಂದರ್ ಸಿಂಗ್ ಹೂಡಾ , ಆನಂದ್ ಶರ್ಮ ಒಳಗೊಂಡಂತೆ ಕಾಂಗ್ರೆಸ್​ನ 30ಕ್ಕೂ ಹೆಚ್ಚು ಹಿರಿತಲೆಗಳು ಖರ್ಗೆ ಅವರ ಹೆಸರಿಗೆ ಸೂಚಕರಾಗಿದ್ದಾರೆ.

ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಕೊನೆ ಕ್ಷಣದಲ್ಲಿ ಪ್ರವೇಶ ಪಡೆದ ಖರ್ಗೆಯವರಿಗೆ (Mallikarjun Kharge) ಅದೃಷ್ಟ ಖುಲಾಯಿಸಿದೆ.

ಇದನ್ನೂ ಓದಿ : ಆರ್​ಎಸ್​ಎಸ್​​ ಕೈಗೊಂಬೆ ಬೊಮ್ಮಾಯಿಗೆ ಈಗ ಅವಮಾನವಂತೆ – ಎಚ್​ಸಿ ಮಹಾದೇವಪ್ಪ ಕಿಡಿ

LEAVE A REPLY

Please enter your comment!
Please enter your name here