ಚುನಾವಣೆಗಾಗಿ ಕೊಟ್ಟಿರುವ ಹಣವನ್ನು ವಾಪಸ್ ಕೊಡುವಂತೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಸಿ ನಾರಾಯಣಗೌಡ ಮನವಿ ಮಾಡಿದ್ದಾರೆ.
ಚುನಾವಣೆಯಲ್ಲಿ ಸೋತ ಬಳಿಕ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾಜಿ ಸಚಿವರು ತಾವು ಚುನಾವಣೆಗಾಗಿ ಕೊಟ್ಟಿರುವ ದುಡ್ಡು ಹಂಚಿಕೆ ಆಗದೇ ಮೋಸ ಹೋಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ನೋವು ಸ್ವಲ್ಪ ದಿನ ಇರುತ್ತೆ. ಯಾಕೆಂದ್ರೆ ಕೊಟ್ಟ ಹಣವನ್ನು ಕೊಡದೇ ಇದ್ರೆ (ಮತದಾರರಿಗೆ ಕೊಡದೇ ಇದ್ರೆ) ವಾಪಸ್ ಕೊಡಿ. ಕೆಲವು ಕಡೆ, ಎಲ್ಲ ಕಡೆ ಅಂತ ನಾನು ಹೇಳಲು ಬಯಸಲ್ಲ, ಕೊಟ್ಟ ಹಣವನ್ನು ಕೊಡದನೇ ಇದ್ರೆ ದಯವಿಟ್ಟು ನಮ್ಮ ಪಾರ್ಟಿಗೆ ಅಂತ ಟ್ರಸ್ಟ್ ಅಂತ ಮಾಡೋಣ. ದಯವಿಟ್ಟು ತಂದುಕೊಡಿ ಅಂತ ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ತೀದ್ದೀನಿ. ಎಷ್ಟೋ ಕಡೆ ಹಣ ತಲುಪಿಲ್ವಂತೆ. ನಾನೂ ರಿಪೋರ್ಟ್ ತರಿಸಿಕೊಂಡಿದ್ದೀನಿ ಅಣ್ಣ, ಅದನ್ನು (ಹಣವನ್ನು) ಇಲ್ಲೇ ತಂದುಕೊಡ್ರಣ್ಣ, ನಮಗೆ ಬೇಡ, ನಾರಾಯಣಗೌಡಗೆ 1 ರೂಪಾಯಿ ಬೇಡ. ಅವತ್ತು ಮುಗಿದುಹೋಯ್ತು, ನಾವು ಎಲ್ಲರೂ ಕುತ್ಕೊಂಡು ಲೆಕ್ಕ ಮಾಡಿದ್ವೋ, ಅವತ್ತು ಇಷ್ಟು ಖರ್ಚು ಮಾಡ್ಬೇಕು ಅಂತ ತೀರ್ಮಾನನೂ ಆಯ್ತು, ಸಾಲನೋ ಮಲ್ಲನೋ..ತೀರಿಸಿಬಿಡುವಂತ ಶಕ್ತಿನೂ ನನಗಿದೆ. ಸಾಲವನ್ನು ತೀರಿಸುವಂತ ಶಕ್ತಿನೂ ಇದೆ, ಯಾರತ್ರನೂ ಹೋಗಿ ಕೈಬಾಗಿ ಬೇಡುವಂತ ಸಮಯ ಬರಲ್ಲ. ಭಗವಂತ ನಮಗೆ ಆರ್ಶೀವಾದ ಮಾಡ್ತಾನೆ ಅಂತ ಖಂಡಿತಾ ಹೇಳಕ್ಕೆ ಬಯಸ್ತಿದ್ದೀನಿ
ಎಂದು ಬಹಿರಂಗ ವೇದಿಕೆಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಬಿಜೆಪಿಯಿಂದಲೇ ಸ್ಪರ್ಧಿಸಿದ್ದ ನಾರಾಯಣಗೌಡ ಅವರು ಜೆಡಿಎಸ್ ಅಭ್ಯರ್ಥಿ ಎದುರು ಸೋಲು ಕಂಡಿದ್ದರು.
ADVERTISEMENT
ADVERTISEMENT