ಗ್ಯಾರಂಟಿ ಯೋಜನೆ ಜಾರಿ- ಕಾಂಗ್ರೆಸ್​ ಸರ್ಕಾರದ ಮೇಲೆ ಯಡಿಯೂರಪ್ಪ ವಿಶ್ವಾಸ

ಕಾಂಗ್ರೆಸ್​ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತಾಡಿದ ಯಡಿಯೂರಪ್ಪ,

ನನ್ನ ಪ್ರಕಾರ ಅವರು ಏನು ಭರವಸೆ ಕೊಟ್ಟಿದ್ದಾರೋ ಅದನ್ನು ಈಡೇರಿಸ್ತಾರೆ. ನಿನ್ನೆಯೇ ಸರ್ಕಾರಿ ಆಜ್ಞೆ ಹೊರಡಿಸಿದ್ದಾರೆ. ಅವರು ಜಾರಿಗೊಳಿಸ್ತಾರೆ ಎಂಬ ವಿಶ್ವಾಸವಿದೆ. ಯಾರೋ ಹೇಳಿದ ಮಾತಿಗೆ ನಾನು ಹೆಚ್ಚು ಒತ್ತು ಕೊಡೋಕೆ ಹೋಗಲ್ಲ. ಅವರೇನು ಐದು ಭರವಸೆ ಕೊಟ್ಟಿದ್ದಾರೆ ಅದನ್ನು ಮಾಡ್ತಾರೆ ಎಂಬ ವಿಶ್ವಾಸವಿದೆ, ಈಗಾಗಲೇ ಸರ್ಕಾರಿ ಆಜ್ಞೆ ಹೊರಡಿಸಲು ಶುರು ಮಾಡಿದ್ದಾರೆ. ಅದರಿಂದ ಅನಗತ್ಯ ಟೀಕೆ ಮಾಡಲು ನಾನು ಇಷ್ಟಪಡಲ್ಲ

ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ ಘೋಷಣೆ ಜಾರಿಗೆ ವಿಫಲವಾಗಿದೆ ಎಂಬ ಬಿಜೆಪಿ ನಾಯಕರ ಸರಣಿ ಆರೋಪಗಳ ನಡುವೆ ಯಡಿಯೂರಪ್ಪನವರು ಕಾಂಗ್ರೆಸ್​ ಸರ್ಕಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವುದು ಮಹತ್ವ ಪಡೆದಿದೆ.