ಗೆಳತಿಯನ್ನೇ ಕತ್ತರಿಸಿ ಕುಕ್ಕರ್​ನಲ್ಲಿಟ್ಟು ಬೇಯಿಸಿದ ಕಿರಾತಕ..!

ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಮರೆಮಾಸುವ ಮುನ್ನವೇ, ಅದಕ್ಕಿಂತಲೂ ಘೋರ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಮುಂಬೈನ ಅಪಾರ್ಟ್‌‌ಮೆಂಟ್ ಒಂದ್ರಲ್ಲಿ ಹಂತಕನೊಬ್ಬ ಗೆಳತಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆ ಮಾಂಸವನ್ನ ಕುಕ್ಕರ್‌‌ನಲ್ಲಿ ಹಾಕಿ ಬೇಯಿಸಿದ್ದಾನೆ.
56 ವರ್ಷದ  ಮನೋಜ್ ಸಹಾನಿ ಎಂಬುವವನು 36  ವರ್ಷದ ಸರಸ್ವತಿ ಎಂಬಾಕೆಯ ಜೊತೆ ಲಿವ್ ಇನ್ ರಿಲೇಷನ್‌‌ಶಿಪ್‌‌ನಲ್ಲಿದ್ದ.
ಕ್ಷುಲ್ಲಕ ಕಾರಣಕ್ಕೆ ಇಬ್ಬರಲ್ಲಿ ಜಗಳ ಶುರುವಾಗಿದೆ. ಆಗ ಮನೋಜ್ ಸಾಹನಿ ಪ್ರೇಯಸಿಯನ್ನು ಮರ ಕತ್ತರಿಸುವ ಯಂತ್ರದಿಂದ ಪ್ರೇಯಸಿಯನ್ನ ಕತ್ತರಿಸಿದ್ದಾನೆ. ಬಳಿಕ ಅದನ್ನು ಕುಕ್ಕರ್‌‌ನಲ್ಲಿ ಹಾಕಿ ಬೇಯಿಸಿದ್ದಾನೆ.

ಎರಡು ಮೂರು ದಿನದ ಬಳಿಕ ಅಕ್ಕಪಕ್ಕದ ಮನೆಯವರಿಗೆ ಕೊಳೆತ ವಾಸನೆ ಬಂದ್ಮೇಲೆ ಪೊಲೀಸ್ರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ರಿಗೆ ಕೊಳೆತ ಶವ, ಕತ್ತರಿಸಿ ಕುಕ್ಕರ್‌‌ನಲ್ಲಿರೋ ಮಹಿಳೆಯ ಮಾಂಸದ ತುಂಡುಗಳನ್ನ ನೋಡಿ ಶಾಕ್ ಆಗಿದೆ.. ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ದೆಹಲಿ ಶ್ರದ್ಧಾ ವಾಕರ್ ಕೇಸ್:
ದೆಹಲಿಯಲ್ಲಿ ಕಳೆದ ವರ್ಷ ಮೇನಲ್ಲಿ ಆಫ್ತಾಬ್ ಪೂನಾವಾಲ ಎಂಬಾತ ಲಿವಿಂಗ್ ರಿಲೇಷನ್‌‌ಶಿಪ್‌‌ನಲ್ಲಿದ್ದ ಶ್ರದ್ಧಾ ವಾಕರ್‌‌ನನ್ನು ಕೊಂದು ದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌‌ನಲ್ಲಿ ಇಟ್ಟಿದ್ದ.
ಬಳಿಕ ಒಂದೊಂದೇ ತುಂಡುಗಳನ್ನ ದೆಹಲಿ ಹೊರವಲಯದ ಕಾಡಿಗೆ ಹೋಗಿ ಎಸೆದು ಬರ್ತಿದ್ದ