ADVERTISEMENT
ಬಡವರಿಗೆ ಉಚಿತವಾಗಿ ಐದು ಕೆ ಜಿ ಅಕ್ಕಿ ನೀಡುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇನ್ನೂ ಐದು ವರ್ಷ ವಿಸ್ತರಿಸಿದೆ.
2024ರ ಜನವರಿಯಿಂದ ಅನ್ವಯವಾಗುವಂತೆ ಪ್ರಧಾನಮಂತ್ರಿ ಬಡವರ ಕಲ್ಯಾಣ ಅನ್ನ ಯೋಜನೆಯನ್ನು ಐದು ವರ್ಷ ಅಂದರೆ 2029ರವರೆಗೆ ವಿಸ್ತರಿಸಲು ಪ್ರಧಾನ ಮಂತ್ರಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಈ ಯೋಜನೆಯ ವಿಸ್ತರಣೆಯಿಂದ 81 ಕೋಟಿ ಮಂದಿಗೆ ಲಾಭ ಆಗಲಿದ್ದು, ಐದು ವರ್ಷಗಳಲ್ಲಿ ಯೋಜನೆ ಜಾರಿಗೆ 11 ಲಕ್ಷದ 80 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಜೊತೆಗೆ 15,000 ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್ ಪೂರೈಸುವ ನೆರವು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ 1,261 ಕೋಟಿ ರೂಪಾಯಿ ವೆಚ್ಚವಾಗಲಿದೆ.
ADVERTISEMENT