ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭ ಆಗಿರುವ ನಡುವೆ ಪ್ರಮುಖ ಬಿಜೆಪಿ ಸಚಿವರು ಈಗ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.
ಮೂಲಗಳ ಪ್ರಕಾರ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಬಹುದು.
ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಎಸ್ಬಿಎಂ ಎಂದೇ ಕರೆಸಿಕೊಳ್ತಿದ್ದ ಅಂದರೆ ಎಸ್ಟಿ ಸೋಮಶೇಖರ್, ಮುನಿರತ್ನ ಮತ್ತು ಬೈರತಿ ಬಸವರಾಜ್ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು.
ಆದರೆ ಯಶವಂತಪುರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿದರೆ ಸೋಲು ಖಚಿತ ಎಂಬ ಆತಂಕದ ಹಿನ್ನೆಲೆಯಲ್ಲಿ ಈಗ ಮತ್ತೆ ಮಾತೃಪಕ್ಷ ಕಾಂಗ್ರೆಸ್ಗೆ ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
2013, 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ನಿಂದ ಸೋಮಶೇಖರ್ ಗೆದ್ದಿದ್ದರು. ಆದರೆ 2019ರಲ್ಲಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಿಂದ ಗೆದ್ದಿದ್ದರು.
ಆದರೆ ಸದ್ಯಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಸ್ಥಿತಿ ಸಚಿವ ಸೋಮಶೇಖರ್ ಅವರಿಗೆ ಪೂರಕವಾಗಿಲ್ಲ. ಒಂದು ವೇಳೆ ಬಿಜೆಪಿಯಿಂದಲೇ ಸ್ಪರ್ಧಿಸಿದರೆ ಜೆಡಿಎಸ್ನ ಜವರಾಯಿಗೌಡ ಅವರು ಗೆಲ್ಲಬಹುದು ಎನ್ನುವುದು ಸ್ವತಃ ಸಚಿವರೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಬಿಜೆಪಿಯಲ್ಲಿ ಸ್ವತಃ ಯಡಿಯೂರಪ್ಪ ಅವರೇ ಮೂಲೆಗುಂಪಾಗಿರುವುದು ಕೂಡಾ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣ ಆಗಬಹುದು ಎಂಬುದು ಸೋಮಶೇಖರ್ ಆತಂಕ.
ಈ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್ಗೆ ಮರಳು ಬಗ್ಗೆ ಯೋಚನೆ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯೂ ತಮಗೆ ಮಾರಕವಾಗಬಹುದು ಎನ್ನುವುದು ಸೋಮಶೇಖರ್ ಆತಂಕ.
ಯಶವಂತಪುರ ಕ್ಷೇತ್ರದಲ್ಲಿ 75 ಸಾವಿರ ದಲಿತ ಮತಗಳು ಮತ್ತು 25 ಸಾವಿರ ಮುಸಲ್ಮಾನ ಮತಗಳಿವೆ. ಒಂದು ವೇಳೆ ಬಿಜೆಪಿಯಿಂದ ಸ್ಪರ್ಧಿಸಿದರೆ ಈ ಮತಗಳೂ ಕೈ ತಪ್ಪಬಹುದು ಎಂಬ ಆತಂಕದಲ್ಲಿ ಸಚಿವ ಸೋಮಶೇಖರ್ ಇದ್ದಾರೆ.
ADVERTISEMENT
ADVERTISEMENT