ಯಡಿಯೂರಪ್ಪ ಅಲ್ಲ, ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ – ಬಿಜೆಪಿಯಿಂದ ಸ್ಪಷ್ಟ ಸಂದೇಶ – ಪ್ರಚಾರ ಸಮಿತಿಗೆ ಬೊಮ್ಮಾಯಿ ನಾಯಕತ್ವ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ರವಾನಿಸಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ನಾಯಕತ್ವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಗಿದೆ.

ಯಡಿಯೂರಪ್ಪ ಅವರನ್ನು ಓಲೈಸುವ ಸಲುವಾಗಿ ಯಡಿಯೂರಪ್ಪ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬ ಸಂದೇಶವನ್ನು ರಾಷ್ಟ್ರೀಯ ನಾಯಕರು ರವಾನಿಸಬಹುದು ಎಂದು  ಭಾವಿಸಲಾಗಿತ್ತು.

ಆದರೆ ಚುನಾವಣಾ ಪ್ರಚಾರ ಸಮಿತಿಗೆ ಇತರೆ 25 ಮಂದಿಯಂತೆ ಯಡಿಯೂರಪ್ಪ ಕೂಡಾ ಒಬ್ಬ ಸದಸ್ಯರಾಗಿದ್ದಾರೆ.

ವಲಸಿಗರ ಪೈಕಿ ಸಚಿವ ಡಾ ಕೆ ಸುಧಾಕರ್​, ಎಸ್​ ಟಿ ಸೋಮಶೇಖರ್​ ಮತ್ತು ರಮೇಶ್​ ಜಾರಕಿಹೊಳಿ ಅವರನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಸಮಿತಿಯಲ್ಲಿದ್ದಾರೆ.

ಶೋಭಾ ಕರಂದ್ಲಾಜೆ ಸಂಚಾಲಕಿ:

ಚುನಾವಣಾ ನಿರ್ವಹಣಾ ಸಮಿತಿಗೆ ಶೋಭಾ ಕರಂದ್ಲಾಜೆ ಅವರನ್ನು ಸಂಚಾಲಕಿಯನ್ನಾಗಿ ಬಿಜೆಪಿ ನೇಮಿಸಿದೆ. ಈ ಸಮಿತಿಯಲ್ಲಿ ತೇಜಸ್ವಿನಿ ಅನಂತ್​ಕುಮಾರ್​ ಸೇರಿದಂತೆ 13 ಮಂದಿ ಸದಸ್ಯರಿದ್ದಾರೆ.

LEAVE A REPLY

Please enter your comment!
Please enter your name here