ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಪ್ರಯಾಣಿಸ್ತಿದ್ದ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.
ಮಧ್ಯಪ್ರದೇಶದ ರಾಜ್ಘರ್ನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ದಿಗ್ವಿಜಯ್ ಸಿಂಗ್ ಪ್ರಯಾಣಿಸ್ತಿದ್ದ ಕಾರಿನ ಮುಂದೆ ಪೊಲೀಸರ ಎಸ್ಕಾರ್ಟ್ ಜೀಪ್ ಸಾಗಿತ್ತು. ಈ ವೇಳೆ ಬೈಕ್ ಸವಾರ ಡಿವೈಡರ್ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದರು.
ಪೊಲೀಸ್ ಜೀಪ್ ಹೋದ ಬಳಿಕ ಒಬ್ಬ ಬೈಕ್ ಸವಾರ ಇದ್ದಕಿದ್ದಂತೆ ತನ್ನ ಬೈಕ್ನ್ನು ತಿರುಗಿಸಿದ. ಆ ವೇಳೆ ಬರುತ್ತಿದ್ದ ದಿಗ್ವಿಜಯ್ ಸಿಂಗ್ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಪಕ್ಕದಲ್ಲಿದ್ದ ಕಂಬಕ್ಕೆ ಹೋಗಿ ಬಡಿದಿದ್ದಾನೆ. ತಕ್ಷಣವೇ ಕಾರಿನಿಂದ ಇಳಿದ ದಿಗ್ವಿಜಯ್ ಸಿಂಗ್ ಮತ್ತು ಇತರರು ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಸಿಸಿಟಿವಿ ಪ್ರಕಾರ ಬೈಕ್ ಸವಾರನದ್ದೇ ತಪ್ಪು ಎನ್ನುವುದು ದೃಢವಾಗಿದೆ
ADVERTISEMENT
ADVERTISEMENT