ಕ್ರೀಡಾ ಮತ್ತು ಯುವಜನ ಸಚಿವ ನಾರಾಯಣಗೌಡ ಅವರು ಕಾಂಗ್ರೆಸ್ ಹೋಗುವ ನಿರ್ಧಾರದಿಂದ ಹಿಂದೆ ಸರಿದ್ದಾರೆ. ಕೆ ಆರ್ ಪೇಟೆ ಶಾಸಕರು ಬಿಜೆಪಿಯಲ್ಲೇ ಉಳಿಯಲಿದ್ದಾರೆ.
ನಾರಾಯಣಗೌಡ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ಈ ಬಾರಿಯೂ ಕೆ ಆರ್ ಪೇಟೆಯಿಂದ ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು, ನೀವು ಚಿಂತೆ ಮಾಡ್ಬೇಡಿ. ಅಲ್ಲದೇ ಚುನಾವಣೆ ವೇಳೆಗೆ ಪಕ್ಷ ಬಿಟ್ಟು ಹೋದರೆ ಮುಜುಗರ ಆಗುತ್ತದೆ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ನಾರಾಯಣಗೌಡ ಅವರಿಗೆ ಸಲಹೆ ನೀಡಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಭರವಸೆ ಆಧರಿಸಿ ನಾರಾಯಣಗೌಡ ಅವರು ಬಿಜೆಪಿಯಲ್ಲೇ ಉಳಿದುಕೊಳ್ಳುವ ಬಗ್ಗೆ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ADVERTISEMENT
ADVERTISEMENT