ಅಮುಲ್ ಹಾಲಿನ ಬೆಲೆಯನ್ನು ಏರಿಕೆ ಮಾಡಿದೆ. ಹೊಸ ದರ ಇಂದಿನಿಂದಲೇ ಅನ್ವಯ ಆಗಲಿದೆ.
ಅಮುಲ್ ಹಾಲಿನ (ಎಲ್ಲ ಮಾದರಿ ಹಾಲುಗಳು) ಲೀಟರ್ಗೆ 3 ರೂಪಾಯಿಯಷ್ಟು ದುಬಾರಿ ಆಗಿದೆ.
ಹಾಲಿನ ದರ ಏರಿಕೆ ಬಗ್ಗೆ ಗುಜರಾತ್ ಹಾಲು ಸಹಕಾರ ಮತ್ತು ಮಾರುಕಟ್ಟೆ ಸಂಘ ಮಾಹಿತಿ ನೀಡಿದೆ.
ಕಳೆದ 10 ತಿಂಗಳಲ್ಲಿ ಅಮುಲ್ ಹಾಲಿನ ದರ ಲೀಟರ್ಗೆ 12 ರೂಪಾಯಿಯಷ್ಟು ದುಬಾರಿಯಾಗಿದೆ. ಕಳೆದ 8 ವರ್ಷಗಳಲ್ಲಿ ಅಮುಲ್ ಒಂದು ವರ್ಷದೊಳಗೆ ಮಾಡಿರುವ ಅತ್ಯಧಿಕ ಹಾಲಿನ ದರ ಏರಿಕೆ ಇದಾಗಿದೆ.
2013-2014ರ ಅವಧಿಯಲ್ಲಿ ಹಾಲಿನ ದರವನ್ನು ಅಮುಲ್ ಲೀಟರ್ಗೆ 8 ರೂಪಾಯಿಯಷ್ಟು ಹೆಚ್ಚಳ ಮಾಡಿತ್ತು.
ಇತ್ತ ಖಾಸಗಿ ಹಾಲು ಉತ್ಪಾದಕ ಕಂಪನಿ ಗೋವರ್ಧನ್ ಇಂಡಿಯಾ ಕೂಡಾ ಫೆಬ್ರವರಿ 2ರಿಂದಲೇ ಹಾಲಿನ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿಯಷ್ಟು ಹೆಚ್ಚಳ ಮಾಡಿದೆ.
ಇನ್ನು ಮದರ್ ಡೈರಿ ಕಂಪನಿಯ ಹಾಲಿನ ಬೆಲೆ ಕಳೆದ ವರ್ಷದ ಮಾರ್ಚ್ನಿಂದ ಕಳೆದ ಡಿಸೆಂಬರ್ ಅವಧಿಯಲ್ಲಿ 9 ರೂಪಾಯಿಯಷ್ಟು ಅಂದ್ರೆ ಲೀಟರ್ಗೆ 57 ರೂಪಾಯಿಯಿಂದ 66 ರೂಪಾಯಿಗೆ ಏರಿಕೆ ಆಗಿದೆ.