ADVERTISEMENT
ಮೇ 3ರಿಂದ ಜನಾಂಗೀಯ ಹಿಂಸಾಚಾರದಿಂದ ನಲುಗುತ್ತಿರುವ ಬಿಜೆಪಿ ಆಡಳಿತವಿರುವ ಮಣಿಪುರಕ್ಕೆ ವಿರೋಧ ಪಕ್ಷಗಳ ಸಂಸದರ ನಿಯೋಗ ಎರಡು ದಿನಗಳ ಭೇಟಿ ನೀಡುತ್ತಿದೆ.
ನಾಳೆ ಅಂದರೆ ಜುಲೈ 29 ಮತ್ತು ಜುಲೈ 30ರಂದು ಎರಡು ದಿನ ಮಣಿಪುರಕ್ಕೆ ತೆರಳಿ ಮೂರು ತಿಂಗಳಿಂದ ಆಗಿರುವ ಜನಾಂಗೀಯ ಹಿಂಸಾಚಾರ, ದಂಗೆ, ಅತ್ಯಾಚಾರ, ಹತ್ಯೆ ಸಂಬಂಧ ಮಾಹಿತಿ ಕಲೆ ಹಾಕಲಿದೆ.
ವಿರೋಧ ಪಕ್ಷಗಳ ನಿಯೋಗದಲ್ಲಿ 20 ಮಂದಿ ಸಂಸದರು ಇರಲಿದ್ದಾರೆ.
ಅಧೀರ್ ರಂಜನ್ ಚೌಧರಿ – ಕಾಂಗ್ರೆಸ್
ಗೌರವ್ ಗೊಗೋಯ್ – ಕಾಂಗ್ರೆಸ್
ರಾಜೀವ್ ರಂಜನ್ ಸಿಂಗ್ – ಜೆಡಿಯು
ಸುಶ್ಮಿತಾ ದೇವ್ – ಟಿಎಂಸಿ
ಕನಿಮೋಳಿ ಕರುಣಾನಿಧಿ – ಡಿಎಂಕೆ
ಸಂದೋಷ್ ಕುಮಾರ್ ಪಿ – ಸಿಪಿಐ
ಪ್ರೊಫೆಸರ್ ಮನೋಜ್ ಕುಮಾರ್ ಝಾ – ಆರ್ಜೆಡಿ
ಜಾವೇದ್ ಅಲಿ ಖಾನ್ – ಎಸ್ಪಿ
ಮಹೌ ಮಾಜಿ – ಜೆಎಂಎಂ
ಪಿ ಪಿ ಮೊಹ್ಮದ್ ಫೈಜಲ್ – ಎನ್ಸಿಪಿ
ಅನೀಲ್ ಪ್ರಸಾದ್ ಹೆಗ್ಡೆ – ಜೆಡಿಯು
ಇ ಟಿ ಮೊಹಮ್ಮದ್ ಬಶೀರ್ – ಇಂಡಿಯನ್ ಮುಸ್ಲಿಂ ಲೀಗ್
ಎನ್ ಕೆ ಪ್ರೇಮಚಂದ್ರನ್ – ಆರ್ಎಸ್ಪಿ
ಸುಶೀಲ್ ಗುಪ್ತಾ – ಆಪ್
ಅರವಿಂದ್ ಸಾವಂತ್ – ಶಿವಸೇನಾ
ಡಿ ರವಿಕುಮಾರ್ – ವಿಸಿಕೆ
ತೋಲ್ ತಿರುಮವಲವನ್ – ವಿಸಿಕೆ
ಜಯಂತ್ ಸಿಂಗ್ – ಆರ್ಎಲ್ಡಿ
ಫುಲ್ಹೋ ದೇವಿ ನೆಟಾಂ – ಕಾಂಗ್ರೆಸ್
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮಂಡಿಸಿರುವ ಹಿನ್ನೆಲೆಯಲ್ಲಿ ವಿಪಕ್ಷಗಳ ಸಂಸದರ ನಿಯೋಗದ ಭೇಟಿ ಮಹತ್ವ ಪಡೆದಿದೆ.
ಮಣಿಪುರದಲ್ಲಿ ಮೇ 3ರಿಂದ ಹಿಂಸಾಚಾರಕ್ಕೆ 162 ಮಂದಿ ಹತ್ಯೆಯಾಗಿದ್ದು, 6,066 ಅಧಿಕ ಎಫ್ಐಆರ್ಗಳು ದಾಖಲಾಗಿವೆ.
ADVERTISEMENT