ಮಹಾರಾಷ್ಟ್ರ ರಾಜ್ಯದಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಮತ್ತು ಶಿವಸೇನೆ ಏಕನಾಥ್ ಶಿಂಧೆ ಬಣ ಮುಖಭಂಗ ಅನುಭವಿಸಿದೆ.
ಐದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 2 ಕ್ಷೇತ್ರದಲ್ಲಿ ಗೆದ್ದಿದೆ.
ಮೂರು ಕ್ಷೇತ್ರದಲ್ಲಿ ಮಹಾಮೈತ್ರಿಕೂಟ ಗೆದ್ದಿದೆ. 1 ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ನಾಗ್ಪುರ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ. ಈ ಮೂಲಕ ಈ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಸಿದುಕೊಂಡಿದೆ.
ನಾಗ್ಪುರ ಆರ್ಎಸ್ಎಸ್ನ ಕೇಂದ್ರ ಕಚೇರಿ ಇರುವ ನಗರ. ಜೊತೆಗೆ ಮಾಜಿ ಮುಖ್ಯಮಂತ್ರಿ,ಹಾಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ತವರೂರು.
ಅಮರಾವತಿ ಪದವೀಧರ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದಿದೆ. ಈ ಕ್ಷೇತ್ರ ಈ ಹಿಂದೆ ಬಿಜೆಪಿ ಹಿಡಿತದಲ್ಲಿತ್ತು.
ಔರಂಗಬಾದ್ ಶಿಕ್ಷಕರ ಕ್ಷೇತ್ರದಲ್ಲಿ ಎನ್ಸಿಪಿ ಗೆದ್ದಿದೆ.
ಕೊಂಕಣ ಶಿಕ್ಷಕರ ಕ್ಷೇತ್ರದಲ್ಲೇ ಬಿಜೆಪಿ ಗೆದ್ದಿದೆ. ನಾಸಿಕ್ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಈ ಎರಡೂ ಕ್ಷೇತ್ರಗಳು ಈ ಹಿಂದೆ ಮಹಾಮೈತ್ರಿಕೂಟದ ತೆಕ್ಕೆಯಲ್ಲಿತ್ತು.
ADVERTISEMENT
ADVERTISEMENT