BREAKING: ಮತ್ತೆ 1,200 ಉದ್ಯೋಗಿಗಳನ್ನು ತೆಗೆದುಹಾಕಿದ Byju’s

ಎಜುಟೆಕ್​ ಕಂಪನಿ ಬೈಜುಸ್​​ ತನ್ನ ಕಂಪನಿಯಿಂದ ಮತ್ತಷ್ಟು ಉದ್ಯೋಗಿಗಳನ್ನು ತೆಗೆದುಹಾಕಿದೆ. ಈ ಬಾರಿ 1000-1,200 ಉದ್ಯೋಗಿಗಳನ್ನು ತೆಗೆದು ಹಾಕಿದೆ.
ಬೈಜುಸ್​​ ತನ್ನ ಎಂಜಿನಿಯರಿಂಗ್​ ತಂಡದಿಂದಲೇ 300 ಮಂದಿಯನ್ನು ತೆಗೆದುಹಾಕಿದೆ.
ಲಾಜಿಸ್ಟಿಕ್​ ಟೀಂನಲ್ಲಿದ್ದ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 50ಕ್ಕೆ ಕಡಿತಗೊಳಿಸಲಾಗಿದೆ.
ಅಕ್ಟೋಬರ್​ನಲ್ಲಿ 2,500 ಮಂದಿಯನ್ನು ಬೈಜುಸ್​​ ಕೆಲಸದಿಂದ ತೆಗೆದುಹಾಕಿತ್ತು.ಈ ಮೂಲಕ ಬೈಜುಸ್​​ನಲ್ಲಿ ಉದ್ಯೋಗ ಕಳೆದುಕೊಂಡಿರುವವರ ಪ್ರಮಾಣ ಈಗ 3,700ಕ್ಕೆ ಏರಿಕೆ ಆಗಿದೆ.
ಎಂಜಿನಿಯರಿಂಗ್​​, ಮಾರ್ಕೆಟಿಂಗ್​ ಮತ್ತು ಲಾಜಿಸ್ಟಿಕ್ಸ್ , ಕಮ್ಯೂನಿಕೇಷನ್​ ಟೀಂನಿಂದ ಉದ್ಯೋಗಿಗಳನ್ನು ತೆಗೆದುಹಾಕಿದೆ.
ಬೈಜುಸ್​​ ಗ್ರಾಹಕರ ಸಂಖ್ಯೆ ಇಳಿಮುಖ, ಕಂಪನಿಗೆ ಹೊಸದಾಗಿ ಬಂಡವಾಳ ಹರಿದು ಬರದೇ ಇರುವುದು ಉದ್ಯೋಗಿಗಳನ್ನು ತೆಗೆಯಲು ಕಾರಣ ಎನ್ನಲಾಗಿದೆ.
ಈ ಬಾರಿ ಬೈಜುಸ್​ 4,589 ಕೋಟಿ ರೂಪಾಯಿ ಮೊತ್ತದಷ್ಟು ಭಾರೀ ನಷ್ಟ ಅನುಭವಿಸಿತ್ತು.

LEAVE A REPLY

Please enter your comment!
Please enter your name here