BJP: ಮಹಾರಾಷ್ಟ್ರದಲ್ಲಿ BJPಗೆ ಮಹಾ ಮುಖಭಂಗ – ಆಪರೇಷನ್​ ಕಮಲ ಬಳಿಕ ಕುಸಿದ ಜನಾಭಿಪ್ರಾಯ

ಶಿವಸೇನೆ ಮತ್ತು ಎನ್​ಸಿಪಿಗೆ ಗುಂಪು ಗುಂಪಾಗಿ ಆಪರೇಷನ್​ ಕಮಲ ಮಾಡಿದ್ದ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಭಾರೀ ಆಘಾತದ ನಿರೀಕ್ಷೆ ಎದುರಾಗಿದೆ.

ಸಮೀಕ್ಷೆಯ ಪ್ರಕಾರ ಉಪ ಮುಖ್ಯಮಂತ್ರಿ ಅಜಿತ್​ ಪವಾರ್​ ನೇತೃತ್ವದಲ್ಲಿ ಎನ್​​ಸಿಪಿ ವಿಭಜನೆಯಾಗಿ ಬಿಜೆಪಿ ಜೊತೆಗೆ ಕೈಜೋಡಿಸಿದ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿಯ ಪರ ಇದ್ದ ಜನಾಭಿಪ್ರಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಬಿಜೆಪಿ ಪರ ಇದ್ದ ಜನಾಭಿಪ್ರಾಯ ಶೇಕಡಾ 33.8ರಿಂದ ಶೇಕಡಾ 26.8ಕ್ಕೆ ಕುಸಿದಿದೆ. ಕಾಂಗ್ರೆಸ್​ ಪರ ಶೇಕಡಾ 19ರಷ್ಟು ಮಂದಿ ಮತ್ತು ಉದ್ಧವ್​ ಠಾಕ್ರೆ ಶಿವಸೇನೆ ಪರ ಶೇಕಡಾ 12.7ರಷ್ಟು ಜನಾಭಿಪ್ರಾಯವಿದೆ.

ಮಹಾರಾಷ್ಟ್ರದಲ್ಲಿ ಸಕಾಲ್​ ನಡೆಸಿರುವ ಸಮೀಕ್ಷೆ ಪ್ರಕಾರ ಎನ್​ಸಿಪಿ ನಾಯಕ ಶರದ್​ ಪವಾರ್​ ಪರ ಶೇಕಡಾ 14.9ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಜಿತ್​ ಪವಾರ್​ ಅವರ ಪರ ಶೇಕಡಾ 14.9ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏಕನಾಥ್​ ಶಿಂಧೆ ಪರ ಜನಾಭಿಪ್ರಾಯ ಶೇಕಡಾ 5.5ರಿಂದ ಶೇಕಡಾ 4.9ಕ್ಕೆ ಕುಸಿದಿದೆ.

ಸಕಾಲ್​ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಪರ ಶೇಕಡಾ 37.4ರಷ್ಟು ಜನಾಭಿಪ್ರಾಯವಿದ್ದು, ಮಹಾ ವಿಕಾಸ್​ ಅಗಾಡಿ ಅಂದರೆ ಕಾಂಗ್ರೆಸ್​ ಮತ್ತು ಎನ್​ಸಿಪಿ ಹಾಗೂ ಉದ್ಧವ್​ ಠಾಕ್ರೆ ಬಣದ ಪರವಾಗಿ ಒಟ್ಟು ಶೇಕಡಾ 41.5ರಷ್ಟು ಜನಾಭಿಪ್ರಾಯವಿದೆ.

LEAVE A REPLY

Please enter your comment!
Please enter your name here