Rail: ಯಶವಂತಪುರದ 1ನೇ ಫ್ಲಾಟ್​ಫಾರಂಗೆ ಪ್ರವೇಶ ನಿಷೇಧ – ರೈಲ್ವೆ ನಿಲ್ದಾಣಕ್ಕೆ ಈ ಕಡೆಯಿಂದ ಹೋಗಿ

ಮಂಗಳವಾರದಿಂದ ಯಶವಂತಪುರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಂಬರ್ ಒಂದನ್ನು ಕೆಲ ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ.

ಫ್ಲಾಟ್ ಫಾರಂ ನಂಬರ್ 1ರಲ್ಲಿ ಕಾಮಗಾರಿ ನಡೆಸಬೇಕಿರುವ ಹಿನ್ನೆಲೆಯಲ್ಲಿ ಮೊದಲ ಫ್ಲಾಟ್‌ಫಾರಂನಲ್ಲಿ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ.

ರೈಲ್ವೇ ನಿಲ್ದಾಣಕ್ಕೆ ಫ್ಲಾಟ್‌ಫಾರಂ 1 ಮೂಲಕ ಪ್ರಯಾಣಿಕರ ಎಂಟ್ರಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗುತ್ತಿದೆ. ಇದರ ಬದಲಾಗಿ, ರೈಲ್ವೇ ನಿಲ್ದಾಣದ ಮತ್ತೊಂದು ಪಾರ್ಶ್ವದಲ್ಲಿರುವ ತುಮಕೂರು ರಸ್ತೆಯ ಯಶವಂತಪುರ ಮೆಟ್ರೊ ನಿಲ್ದಾಣದ ಬಳಿ ಇರುವ ಪ್ಲಾಟ್‌ಫಾರ್ಮ್ ೬ರ ಕಡೆಯಿಂದ ರೈಲ್ವೇ ನಿಲ್ದಾಣಕ್ಕೆ ಪ್ರವೇಶ ಇರಲಿದೆ.

ಯಶವಂತಪುರ ರೂಲು ನಿಲ್ದಾಣದಲ್ಲಿನ ಸ್ಕೈವಾಕರ್‌ಗಳ ಮೂಲಕ ಇತರೆ ಪ್ಲಾಟ್‌ಫಾರ್ಮ್‌ಗಳಿಗೆ ಪ್ರಯಾಣಿಕರು ಎಂಟ್ರಿ ಕೊಡಬೇಕು.

ಕಾಮಗಾರಿ ಹಿನ್ನೆಲೆಯಲ್ಲಿ ಡಿಜಿಟಲ್ ಮಾಹಿತಿ ಫಲಕಗಳು ಕೂಡ ಕೆಲವು ದಿನಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ.. ಆಗಲಿರುವ ಅಡಚಣೆಗಾಗಿ ವಿಷಾದಿಸುತ್ತೇವೆ.. ಸಾರ್ವಜನಿಕರು ಸಹಕರಿಸಬೇಕು ಎಂದು ನೈಋತ್ಯ ರೈಲ್ವೇ ಇಲಾಖೆ ಕೋರಿದೆ.

LEAVE A REPLY

Please enter your comment!
Please enter your name here