ಗ್ರಾಮ ಪಂಚಾಯತ್​: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಮೈತ್ರಿಕೂಟಕ್ಕೆ ಮೇಲುಗೈ

ಮಹಾರಾಷ್ಟ್ರದಲ್ಲಿ ನಡೆದ ಗ್ರಾಮ ಪಂಚಾಯತ್​​ ಚುನಾವಣೆಯಲ್ಲಿ ಮಹಾ ವಿಕಾಸ ಅಗಾಡಿ (ಮಹಾ ವಿಕಾಸ ಮೈತ್ರಿಕೂಟ) ಮೇಲುಗೈ ಸಾಧಿಸಿದೆ.
ರಾಜ್ಯದ 7,751 ಗ್ರಾಮ ಪಂಚಾಯತ್​ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಮಹಾ ವಿಕಾಸ ಮೈತ್ರಿಕೂಟದಲ್ಲಿ ಎನ್​ಸಿಪಿ 1,563 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್​ 1,001 ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ ಉದ್ಧವ್​ ಠಾಕ್ರೆ ಬಣ 726 ಸ್ಥಾನಗಳನ್ನು ಗೆದ್ದಿದೆ.
ಮಹಾ ವಿಕಾಸ ಮೈತ್ರಿಕೂಟ ಒಟ್ಟು 3,250 ಸ್ಥಾನಗಳನ್ನು ಗೆದ್ದಿದೆ.
ಎನ್​ಡಿಎ ಮೈತ್ರಿ ಕೂಟ ಒಟ್ಟು 3,139 ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ ಬಿಜೆಪಿ 2,318 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಖ್ಯಮಂತ್ರಿ ಏಕನಾಥ್​ ಶಿಂಧೆ ಬಣ 821 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇತರರು 1,362 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here