ನೇಪಾಳದಲ್ಲೇ ರಾಮದೇವ್​ ಕಂಪನಿ ಔಷಧಗಳಿಗೆ ನಿಷೇಧ

ಯೋಗಗುರು ಬಾಬಾ ರಾಮ್​ದೇವ್​ ಅವರು ನಡೆಸುವ ದಿವ್ಯಾ ಫಾರ್ಮಸಿ ಒಳಗೊಂಡಂತೆ ಭಾರತ ಮೂಲದ 16 ಕಂಪನಿಗಳಿಂದ ಔಷಧಿ ಆಮದು ಮಾಡಿಕೊಳ್ಳದಂತೆ ನೇಪಾಳ ನಿರ್ಬಂಧ ಹೇರಿದೆ.
ಪತಂಜಲಿ ಹೆಸರಲ್ಲಿ ಔಷಧೋತ್ಪನ್ನಗಳನ್ನು ತಯಾರಿಸುವ ದಿವ್ಯಾ ಫಾರ್ಮಸಿ, ಗುಜರಾತ್​ ಮೂಲದ ಝೈಡಸ್​ ಲೈಫ್​​ಸೈನ್ಸ್​ ( ಈ ಕಂಪನಿ ಕೋವಿಡ್​ ಲಸಿಕೆಯನ್ನೂ ಕಂಡುಹಿಡಿದಿದೆ)ನ ಔಷಧ ಉತ್ಪನ್ನಗಳ ಆಮದನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ.
ರೆಡಿಯೆಂಟ್​ ಪೆರೆಂಟಲರ್ಸ್​ ಲಿಮಿಟೆಡ್​, ಮರ್ಕ್ಯೂರಿ ಲ್ಯಾಬೋರಟರೀಸ್​ ಲಿಮಿಟೆಡ್​, ಅಲೆಯನ್ಸ್​ ಬಯೋಟೆಕ್​, ಕ್ಯಾಬ್​ಟ್ಯಾಬ್​ ಬಯೋಟೆಕ್​, ಅಗ್ಲೋಮೆಮ್ಡ್​ ಲಿಮಿಟೆಡ್​, ಝೀ ಲ್ಯಾಬೋಟರೀಸ್​, ಡಫೋಡಿಲ್ಸ್​ ಫ್ಯಾರಾಮೆಟಿಕಲ್ಸ್​, ಜಿಎಲ್​​ಎಸ್​ ಫಾರ್ಮ, ​ಯುನಿಜ್ಯುಲೆಸ್​​ ಲೈಫ್​ ಸೈನ್ಸ್​, ಕಾನ್ಪೆಪ್ಟ್​ ಫ್ಯಾರಾಮೆಟಿಕಲ್ಸ್​, ಶ್ರೀ ಆನಂದ್​ ಲೈಫ್​ ಸೈನ್ಸ್​​, ಐಪಿಸಿಎ ಲ್ಯಾಬೋರಟರೀಸ್​, ಕಾಡಿಲಾ ಹೆಲ್ತ್​ಕೇರ್​ ಲಿಮಿಟೆಡ್​, ಡಯಲ್​ ಫ್ಯಾರಾಮೆಟಿಕಲ್ಸ್​, ಮ್ಯಾಕುರ್​​ ಲ್ಯಾಬೋರಟರೀಸ್​ ಕಂಪನಿಗಳ ಔಷಧ ಉತ್ಪನ್ನಗಳಿಗೆ ನೇಪಾಳ ನಿಷೇಧ ಹೇರಿದೆ.
ಈ ಕಂಪನಿಗಳ ತಯಾರಿಕಾ ಘಟಕಗಳಿಗೆ ಏಪ್ರಿಲ್​ ಮತ್ತು ಜೂನ್​ ತಿಂಗಳಲ್ಲಿ ನೇಪಾಳ ತನ್ನ ತಜ್ಞರ ತಂಡವನ್ನು ಕಳುಹಿಸಿತ್ತು.
ಔಷಧ ಆಮದು ಮಾಡಿಕೊಳ್ಳುವ ದೇಶಗಳು ತಾವು ಆಮದು ಮಾಡಿಕೊಳ್ಳುವ ದೇಶದಲ್ಲಿರುವ ಔಷಧ ಕಂಪನಿಗಳ ತಯಾರಿಕಾ ಘಟಕಗಳಿಗೆ ತೆರಳಿ ಪರಿಶೀಲನೆ ಮಾಡುತ್ತವೆ.
ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಗುಣಮಟ್ಟಕ್ಕೆ ಅನುಗುಣವಾಗಿ ಔಷಧ ಉತ್ಪಾದಕ ಗುಣಮಟ್ಟ ಪಾಲಿಸದ ಹಿನ್ನೆಲೆಯಲ್ಲಿ ನೇಪಾಳ ಈ 16 ಕಂಪನಿಗಳ ಔಷಧಗಳ ಆಮದಿಗೆ ನಿಷೇಧ ಹೇರಿದೆ.