ADVERTISEMENT
ಪಾಕಿಸ್ತಾನ ಈಗ ಕಗ್ಗತ್ತಲಲ್ಲಿ ಮುಳುಗಿದೆ. ದಿವಾಳಿ ಅಂಚಿನಲ್ಲಿರುವ ಈ ದೇಶದಲ್ಲಿ ಈಗ ಅಗತ್ಯ ವಿದ್ಯುತ್ ಕೂಡಾ ಪೂರೈಕೆ ಆಗುತ್ತಿಲ್ಲ.
ಸಾಲದ ಸುಳಿ ಮತ್ತು ವಿದೇಶಿ ವಿನಿಮಯ ಸಂಗ್ರಹದಲ್ಲಿ ದಾಖಲೆಯ ಕುಸಿತದಿಂದ ಕಂಗೆಟ್ಟಿರುವ ಪಾಕಿಸ್ತಾನ ವಿದ್ಯುತ್ ಉಳಿತಾಯದತ್ತ ಕ್ರಮಗಳನ್ನು ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ಜನಸಾಮಾನ್ಯರ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದೆ.
ಪಾಕಿಸ್ತಾನದಲ್ಲಿ ರಾತ್ರಿ 8 ಗಂಟೆಯ ಬಳಿಕ ಮಾರುಕಟ್ಟೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಅಂದರೆ ರಾತ್ರಿ 8 ಗಂಟೆಯ ಬಳಿಕ ಮಾರುಕಟ್ಟೆಗಳಲ್ಲಿ ವ್ಯಾಪಾರ-ವ್ಯವಹಾರ ಸ್ತಬ್ಧ ಆಗಲಿದೆ.
ಇದಲ್ಲದೇ ರಾತ್ರಿ 10 ಗಂಟೆಯ ಬಳಿಕ ಮದುವೆ ಸಮಾರಂಭಗಳನ್ನೂ ನಡೆಸುವಂತಿಲ್ಲ.
ಅಲ್ಲದೇ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ರಾತ್ರಿ 8 ಗಂಟೆಯಿಂದ ಮುಚ್ಚುವಂತೆಯೂ ಸೂಚಿಸಲಾಗಿದೆ.
ಒಂದು ಸರ್ಕಾರಿ ನೌಕರರಲ್ಲಿ ಶೇಕಡಾ 20ರಷ್ಟು ಮಂದಿ ಮನೆಯಿಂದಲೇ ಕೆಲಸ ಮಾಡಿದ್ದರೆ ಆಗ 56 ಬಿಲಿಯನ್ ರೂಪಾಯಿಯನ್ನು ಉಳಿಸಬಹುದು ಎನ್ನುವುದು ಪಾಕಿಸ್ತಾನ ಸರ್ಕಾರದ ಅಂದಾಜು.
ಅಲ್ಲದೇ ಪಾಕಿಸ್ತಾನದಲ್ಲಿ ವಿದ್ಯುತ್ನಿಂದ ಚಲಿಸುವ ಎಲೆಕ್ಟ್ರಿಕ್ ವಾಹನಗಳ ಬದಲು ಪೆಟ್ರೋಲ್ನಿಂದ ಚಲಿಸುವ ವಾಹನಗಳನ್ನೇ ಬಳಸುವಂತೆಯೂ ನಿರ್ದೇಶಿಸಲಾಗಿದೆ.
ಜೊತೆಗೆ ವಿದ್ಯುತ್ ಉಳಿತಾಯ ಮಾಡುವ ಫ್ಯಾನ್ ಮತ್ತು ಬಲ್ಪ್ಗಳನ್ನು ವಿತರಿಸುವ ವಿದ್ಯುತ್ ಉಳಿತಾಯಕ್ಕೆ ಕ್ರಮಕೈಗೊಳ್ಳುವ ಘೋಷಣೆ ಮಾಡಿದೆ.
ADVERTISEMENT