ಪ್ರೇಯಸಿ ಹಾಗೂ ಆಕೆಯ ತಾಯಿಯ ಅಶ್ಲೀಲ ವಿಡಿಯೋ ಲೀಕ್ : ವೈದ್ಯನ ಕೊಲೆ

ಪ್ರೀತಿಸಿ ಮದುವೆಯಾಗಬೇಕಿದ್ದ ಹುಡುಗಿ ಮತ್ತವಳ ತಾಯಿಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ ವೈದ್ಯನೊಬ್ಬನ ಹತ್ಯೆ ಮಾಡಲಾಗಿದೆ.

ವೈದ್ಯ ಯುವತಿಯೊಬ್ಬಳನ್ನು ಪ್ರೀತಿಸಿದ್ದ, ಅವರ ಮನೆಯವರನ್ನು ಮದುವೆಗೆ ಒಪ್ಪಿಸಿದ್ದ. ಆದರೆ, ಈ ವೇಳೆ ಪ್ರಮಾದ ನಡೆದು ಯುವತಿಯನ್ನು ಮದುವೆಯಾಗಬೇಕಿದ್ದ ವೈದ್ಯ ಕೊಲೆಯಾಗಿದ್ದಾನೆ.

ಬೆಂಗಳೂರಿನ ಬೇಗೂರು ಬಳಿಯ ನ್ಯೂ ಮೈಕ್ರೋ ಲೇಔಟ್​ನಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ. ವೈದ್ಯ ಡಾ.ವಿಕಾಸ್ ಹಾಗೂ ಪ್ರತಿಭಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ನವೆಂಬರ್​ನಲ್ಲಿ ಇವರ ವಿವಾಹವು ನಿಶ್ಚಿತಗೊಂಡಿತ್ತು. ಆದರೆ, ಡಾ.ವಿಕಾಸ್, ಪ್ರತಿಭಾ ಹಾಗೂ ಅವರ ತಾಯಿಯ ಅಶ್ಲೀಲ ವಿಡಿಯೋವೊಂದನ್ನು ಇನ್​ಸ್ಟಾಗ್ರಾಂಗೆ ಹಾಕಿದ್ದಾನೆ. ಇದರಿಂದ ಪ್ರತಿಭಾ ಮನೆಯವರು ವಿಕಾಸ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಇದನ್ನೂ ಓದಿ : ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ಕೊಲೆ ಪ್ರಕರಣ : ಸತ್ಯ ಸಂಗತಿಗಳು

ಇದರಿಂದ ಮನನೊಂದಿದ್ದ ಯುವತಿ ಪ್ರತಿಭಾ ತನ್ನ ಸ್ನೇಹಿತರ ಬಳಿ ಈ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಆಕ್ರೋಶಗೊಂಡಿದ್ದ ಗೆಳೆಯರಾದ ಸುಶೀಲ್, ಗೌತಮ್ ಮತ್ತು ಸೂರ್ಯ, ವಿಕಾಸ್​ನನ್ನು ಮಾತನಾಡಬೇಕೆಂದು ಕರೆಯಿಸಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

ಗಾಯಗೊಂಡಿದ್ದ ವಿಕಾಸ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿಕಾಸ್ ಸಾವನ್ನಪ್ಪಿದ್ದಾನೆ. ಈ ಕುರಿಸು ಪ್ರಕರಣ ದಾಖಲಿಸಿಕೊಂಡಿದ್ದ ಬೇಗೂರು ಪೊಲೀಸರು ಪ್ರತಿಭಾ, ಸುಶೀಲ್ ಮತ್ತು ಗೌತಮ್​ರನ್ನು ಬಂಧಿಸಿದ್ದಾರೆ. ಸೂರ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ : ನಟ ದರ್ಶನ್​ರಿಂದ ಕೊಲೆ ಬೆದರಿಕೆ : ನಿರ್ಮಾಪಕನಿಂದ ದೂರು ದಾಖಲು

LEAVE A REPLY

Please enter your comment!
Please enter your name here