ಕರ್ನಾಟಕದಲ್ಲಿ 135 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಐತಿಹಾಸಿಕ ಜಯ ಸಾಧಿಸಿರುವ ಕಾಂಗ್ರೆಸ್ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರೀ ಜಯ ಗಳಿಸುವ ಅವಕಾಶ ಹೊಂದಿದೆ ಎಂದು ಪ್ರಮುಖ ಚುನಾವಣಾ ವಿಶ್ಲೇಷಕ ಪಾರ್ಥ ದಾಸ್ ಅಂದಾಜು ಮಾಡಿದ್ದಾರೆ.
ಇವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಲೆ ಕುಗ್ಗಿದೆ ಮತ್ತು ಪ್ರಧಾನಿ ಮೋದಿಗಿಂತ ಸಿದ್ದರಾಮಯ್ಯರೇ ಕರ್ನಾಟಕದಲ್ಲಿ ಜನಪ್ರಿಯ ಎಂದು ನಿಖರ ಚುನಾವಣಾ ವಿಶ್ಲೇಷಣೆ ಮಾಡಿದ್ದರು.
ವಿಧಾನಸಭಾ ಚುನಾವಣೆಯ ಬಳಿಕ ಪಾರ್ಥದಾಸ್ ಅವರು ಮಾಡಿರುವ ಚುನಾವಣಾ ಅಂದಾಜಿನ ಪ್ರಕಾರ ಕರ್ನಾಟಕದ ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ 17 ಸ್ಥಾನಗಳನ್ನು ಗೆಲ್ಲಲು ಅವಕಾಶ ಇದೆ ಎಂದು ಅಂದಾಜಿಸಿದ್ದಾರೆ.
ಪಾರ್ಥ ದಾಸ್ ಅವರ ಪ್ರಕಾರ ಕಾಂಗ್ರೆಸ್ ಗೆಲ್ಲಬಹುದಾದ ಲೋಕಸಭಾ ಕ್ಷೇತ್ರಗಳು:
ಕಲಬುರಗಿ
ರಾಯಚೂರು
ಕೊಪ್ಪಳ
ಬಳ್ಳಾರಿ
ಚಿತ್ರದುರ್ಗ
ಚಿಕ್ಕೋಡಿ
ಹಾವೇರಿ
ದಾವಣಗೆರೆ
ತುಮಕೂರು
ಚಿಕ್ಕಬಳ್ಳಾಪುರ
ಕೋಲಾರ
ಮಂಡ್ಯ
ಬೆಂಗಳೂರು ಗ್ರಾಮಾಂತರ
ಬೆಂಗಳೂರು ಕೇಂದ್ರ
ಚಾಮರಾಜನಗರ
ಮೈಸೂರು
ವಿಜಯಪುರ
ADVERTISEMENT
ADVERTISEMENT