ಕರ್ನಾಟಕದ ಬಳಿಕ ಛತ್ತೀಸ್​ಗಢದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ…?

ಕರ್ನಾಟಕ ಬಳಿಕ ಕಾಂಗ್ರೆಸ್​ ಮತ್ತೊಂದು ರಾಜ್ಯವನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆ ಎಂದು ಚುನಾವಣಾ ವಿಶ್ಲೇಷಕರು ಅಂದಾಜಿಸಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಚುನಾವಣೆ ನಡೆಯಲಿದೆ.

2018ರಲ್ಲಿ ಪ್ರಚಂಡ ಬಹುಮತದೊಂದಿಗೆ ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿತ್ತು.

ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್​ 68 ಸ್ಥಾನಗಳನ್ನು ಗೆದ್ದು ಪ್ರಚಂಡ ಜಯ ಗಳಿಸಿತ್ತು. ಬಿಜೆಪಿ 15 ಸ್ಥಾನ ಗೆದ್ದಿತ್ತು. ಇತರರು 7 ಸ್ಥಾನಗಳನ್ನು ಗೆದ್ದಿದ್ದರು.

ಪ್ರಮುಖ ಚುನಾವಣಾ ವಿಶ್ಲೇಷ ಸಂಸ್ಥೆ ಗ್ರೌಂಡ್​ ಝಿರೋ ರಿಸರ್ಚ್​​ ಪ್ರಕಾರ ಈ ಬಾರಿಯೂ ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ.

ಜಿಝಡ್​ಆರ್​ ಸಂಸ್ಥೆಯ ಶಶಿ ಶಂಕರ್​ ಸಿಂಗ್​ ಅವರು ಎರಡು ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ.

ಶಾಸಕರ ಸಾಧನೆಯನ್ನು ಆಧರಿಸಿ ಚುನಾವಣೆ ಎದುರಿಸಿದರೆ:

ಕಾಂಗ್ರೆಸ್​: 46, ಬಿಜೆಪಿ: 42 ಮತ್ತು ಇತರರು: 02 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಮುಖದ ಆಧಾರದಲ್ಲಿ ಚುನಾವಣೆಗೆ ಹೋದರೆ:

ಕಾಂಗ್ರೆಸ್​: 55, ಬಿಜೆಪಿ: 34, ಇತರೆ: 1 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಶಶಿ ಶಂಕರ್​ ಸಿಂಗ್​ ಅಂದಾಜಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಭೂಪೇಂದ್ರ ಸಿಂಗ್​ ಬಘೇಲ್​ ಅವರು ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಸರ್ಕಾರದ ಮುಖ್ಯಮಂತ್ರಿ ಆಗಿದ್ದಾರೆ.