ನಾಯಿ ದಾಳಿಗೆ ಒಳಗಾದ ಅರ್ಜುನ್ ತೆಂಡೂಲ್ಕರ್

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಂಗಳಕ್ಕಿಳಿದು ಎಲ್ಲರ ಗಮನ ಸೆಳೆದಿದ್ದರು ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್.

ಕಳೆದ ಕೆಲ ಪಂದ್ಯಗಳಲ್ಲಿ ಆಡುವ ತಂಡದಲ್ಲಿಲ್ಲದಿದ್ದರೂ, ನೆಟ್ಸ್‌ನಲ್ಲಿ ತೀವ್ರವಾಗಿ ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಡ್ ನ್ಯೂಸ್ ಒಂದು ಹೊರಬಿದ್ದಿದೆ. ಅರ್ಜುನ್ ತೆಂಡೂಲ್ಕರ್‌ಗೆ ನಾಯಿಯೊಂದು ಕಚ್ಚಿದೆ.

ಸ್ಟೇಡಿಯಂನಲ್ಲಿ ಲಕ್ನೋ ಆಟಗಾರ ಯುಧ್‌ವೀರ್ ಜೊತೆ ಮಾತನಾಡುತ್ತಾ ಅರ್ಜುನ್ ತೆಂಡೂಲ್ಕರ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಎಲ್‌ಎಸ್‌ಜಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದೆ.

ಹೇಗಿದ್ದೀರಾ ಎಂದು ಯುಧ್‌ವೀರ್ ಕೇಳಿದಾಗ, ನನಗೆ ನಾಯಿ ಕಚ್ಚಿದೆ ಎಂದು ಎಡಗೈ ತೋರಿಸಿದ್ದಾರೆ. ಯಾವಗ ಎಂದು ಕೇಳಿದ್ದಕ್ಕೆ ನಿನ್ನೆ ಎಂದು ಅರ್ಜುನ್ ಉತ್ತರಿಸಿದ್ದಾರೆ.