ಇದೇ ಮಂಗಳವಾರ ಅಂದರೆ ಮಾರ್ಚ್ 21ರಿಂದ ಕೆಎಸ್ಆರ್ಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿಗಮಗಳ ಚಾಲಕರು ಮತ್ತು ನಿರ್ವಾಹಕರು ಅನಿರ್ದಿಷ್ಟಾ ವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಸಂಬಳವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ ಶೇಕಡಾ 25ರಷ್ಟು ಸಂಬಳ ಹೆಚ್ಚಳ ಆಗ್ಬೇಕೆಂದು ಸಾರಿಗೆ ನಿಗಮದ ಸಿಬ್ಬಂದಿ ಆಗ್ರಹಿಸಿದ್ದಾರೆ.
ಜೊತೆಗೆ ಶೇಕಡಾ 15ರಷ್ಟು ವೇತನ ಹೆಚ್ಚಳ ಜಾರಿಯಾಗುವುದು ಈ ತಿಂಗಳ 1ನೇ ತಾರೀಕಿನಿಂದ. ಈ ಮೂಲಕ ಸಿಬ್ಬಂದಿಗೆ ಬರಬೇಕಿರುವ 38 ತಿಂಗಳ ಬಾಕಿ ಹೆಚ್ಚುವರಿ ವೇತನ ಸಿಗಲ್ಲ.
ಸರ್ಕಾರದ ಈ ನಿರ್ಧಾರ ಏಕಪಕ್ಷೀಯ ನಿರ್ಧಾರ ಎಂದು ಖಂಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಕ್ರಿಯಾಸಮಿತಿ (6 ಸಂಘಟನೆಗಳಿರುವ ಕ್ರಿಯಾ ಸಮಿತಿ) ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದ್ದಾರೆ.
ADVERTISEMENT
ADVERTISEMENT