BIG NEWS BREAK: ಯಾರಿಗೆ ಟಿಕೆಟ್​..? ಯಾರಿಗಿಲ್ಲ ಟಿಕೆಟ್​..? – ಕಾಂಗ್ರೆಸ್​ ಸಭೆಯಲ್ಲಿ ಆಗಿದ್ದೇನು..?

ಮೂಲಗಳ ಪ್ರಕಾರ ಏಳು ಮಂದಿ ಹಾಲಿ ಶಾಸಕರಿಗೆ ಕಾಂಗ್ರೆಸ್​ ಟಿಕೆಟ್​ ನಿರಾಕರಿಸಿದೆ.

ಈ ಶಾಸಕರಿಗೆ ಈ ಬಾರಿ ಟಿಕೆಟ್​ ಇಲ್ಲ:

ಹರಿಹರ ಶಾಸಕ ರಾಮಪ್ಪ, ಲಿಂಗಸುಗೂರು ಶಾಸಕ ಡಿ ಎಸ್​ ಹಲಗೇರಿ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಕಲಬುರಗಿ ಶಾಸಕಿ ಖನಿಜಾ ಫಾತಿಮಾ, ಅಫ್ಜಲಪುರ ಶಾಸಕ ಎಂವೈ ಪಾಟೀಲ್​, ಪಾವಗಡ ಶಾಸಕ ವೆಂಕಟರಮಣಪ್ಪ ಮತ್ತು ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪಗೆ ಕಾಂಗ್ರೆಸ್​ ಟಿಕೆಟ್​ ನೀಡುತ್ತಿಲ್ಲ.

ಟಿ ಬಿ ಜಯಚಂದ್ರಗೆ ಟಿಕೆಟ್​ ಇಲ್ಲ:

ಮೂಲಗಳ ಪ್ರಕಾರ ಶಿರಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಸಚಿವ ಟಿ ಬಿ ಜಯಚಂದ್ರ ಅವರಿಗೆ ಕಾಂಗ್ರೆಸ್​ ಟಿಕೆಟ್​ ಇಲ್ಲ. ಹಾಲಿ ಶಾಸಕ ರಾಜೇಶ್​ ಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಬರುವ ಹಿನ್ನೆಲೆಯಲ್ಲಿ ಟಿಕೆಟ್​ ನಿರಾಕರಿಸಲಾಗುತ್ತಿದೆ.

ಡಿ ಸುಧಾಕರ್​ಗೆ ಟಿಕೆಟ್​ ಇಲ್ಲ:

ಮಾಜಿ ಸಚಿವ, ಹಿರಿಯೂರು ಮಾಜಿ ಶಾಸಕ ಡಿ ಸುಧಾಕರ್​ಗೆ ಈ ಬಾರಿ ಕಾಂಗ್ರೆಸ್​ ಟಿಕೆಟ್​ ಇಲ್ಲ.

ಮೋಟಮ್ಮ ಮಗಳಿಗೆ ಟಿಕೆಟ್​ ಇಲ್ಲ:

ಮೂಡಿಗೆರೆ ಟಿಕೆಟ್​ ಆಕಾಂಕ್ಷಿಯಾಗಿರುವ ಮೋಟಮ್ಮ ಪುತ್ರಿ ನಯನ ಮೋಟಮ್ಮಗೆ ಕಾಂಗ್ರೆಸ್​ ಟಿಕೆಟ್​ ನೀಡುತ್ತಿಲ್ಲ.

ಬಿಜೆಪಿಯಿಂದ ಇಬ್ಬರು ಸಚಿವರು ಕಾಂಗ್ರೆಸ್​ಗೆ ಸಾಧ್ಯತೆ:

ಸಚಿವ, ಮಹಾಲಕ್ಷ್ಮೀ ಲೇಔಟ್​ ಶಾಸಕ ಗೋಪಾಲಯ್ಯ ಮತ್ತು ಸಚಿವ, ಗೋವಿಂದರಾಜನಗರ ಶಾಸಕ ವಿ ಸೋಮಣ್ಣ ಕಾಂಗ್ರೆಸ್​​ಗೆ ಬರಬಹುದಾದ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳನ್ನು ಮೀಸಲಿಡುವ ಬಗ್ಗೆ ಚರ್ಚೆ ನಡೆದಿದೆ.

ಮೇಲುಕೋಟೆಯಲ್ಲಿ ದರ್ಶನ್​ ಪುಟ್ಟಣ್ಣಯ್ಯಗೆ ಬೆಂಬಲ:

ಈ ಬಾರಿಯೂ ಮೇಲುಕೋಟೆಯಲ್ಲಿ ಸ್ವತಂತ್ರ ಅಭ್ಯರ್ಥಿ ದರ್ಶನ್​ ಪುಟ್ಟಣ್ಣಯ್ಯ ಅವರಿಗೆ ಬೆಂಬಲಿಸಲು ಕಾಂಗ್ರೆಸ್​ ತೀರ್ಮಾನಿಸಿದೆ.

ಅಖಂಡ ಶ್ರೀನಿವಾಸಮೂರ್ತಿಗಿಲ್ಲ ಟಿಕೆಟ್​..?

ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್​ ಕೊಡುವುದಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಿರ್ಧಾರವನ್ನು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಡಲಾಗಿದೆ.

LEAVE A REPLY

Please enter your comment!
Please enter your name here