CLP ಸಭೆಯಲ್ಲಿ ಸಿದ್ದರಾಮಯ್ಯಗೆ ಬಹುಪರಾಕ್

ಬೆಂಗಳೂರು: ಭಾನುವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP meeting)ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah)ಅವರ ಬದ್ಧತೆ, ಪಕ್ಷ  ನಿಷ್ಠೆಗೆ ರಾಜ್ಯ  ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ (Randeep Surjewaala)ಮೆಚ್ಚುಗೆ ಸೂಚಿಸಿದ್ದಾರೆ.

ತಮ್ಮ ಸಹೋದರನ ಸಾವಿನ ನೋವಿನ ನಡುವೆಯೂ ಸಿಎಲ್ ಪಿ ಸಭೆ ಕರೆದ ಸಿದ್ದರಾಮಯ್ಯರನ್ನು ರಣದೀಪ್ ಸುರ್ಜೆವಾಲ ಹಾಡಿ ಹೊಗಳಿದ್ದಾರೆ.

ನನಗೆ ಸಿದ್ದರಾಮಯ್ಯ ಅವರ ಸಹೋದರನ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯಗೆ ಕರೆ ಮಾಡಿ ಸಾಂತ್ವನ ತಿಳಿಸಿದೆ. ಜೊತೆಗೆ ಭಾನುವಾರ  ರಾತ್ರಿ ನಿಗದಿ ಆಗಿದ್ದ  ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ  ಮುಂದೂಡುವ ಬಗ್ಗೆ ಅವರಲ್ಲಿ ಚರ್ಚೆ ನಡೆಸಿದೆ. ಆದರೆ, ಸಿದ್ದರಾಮಯ್ಯ ಇದಕ್ಕೆ ಒಪ್ಪಲಿಲ್ಲ.

BREAKING: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಹೋದರ ನಿಧನ

ನೋ ನೋ ಹಾಗೆ ಮಾಡುವುದು ಬೇಡ.. ಸಹೋದರನ ಸಾವು ನನ್ನ ವೈಯುಕ್ತಿಕ ನೋವಿನ  ವಿಚಾರ. ಆದರೆ ಅದಕ್ಕಾಗಿ ಪಕ್ಷದ ಕಾರ್ಯಕ್ರಮ ನಿಲ್ಲುವುದು ಬೇಡ ಎಂದು ಸಿದ್ದರಾಮಯ್ಯ ತಿಳಿಸಿದರು. ಇದು ನಿಜವಾದ ಪಾರ್ಟಿ ಕಮಿಟ್ಮೆಂಟ್ ಎಂದು ಸಿದ್ದರಾಮಯ್ಯ ಅವರನ್ನು ರಣದೀಪ್ ಸುರ್ಜೆವಾಲ ಹಾಡಿ ಹೊಗಳಿದ್ದಾರೆ. ಸುರ್ಜೆವಾಲ ಮಾತಿಗೆ CLP ಸಭೆಯಲ್ಲಿದ್ದವರೆಲ್ಲ ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here