Friday, May 23, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home News

ಕರ್ನಾಟಕ ಲೋಕಸಭಾ ಸಮೀಕ್ಷೆ – ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇ ಗೆಲ್ಲಲಿದೆ – ಸಮೀಕ್ಷೆ ಲೆಕ್ಕಾಚಾರ

PratikshanaNews by PratikshanaNews
29th May 2024
in News
0
ಕರ್ನಾಟಕ ಲೋಕಸಭಾ ಸಮೀಕ್ಷೆ  – ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇ ಗೆಲ್ಲಲಿದೆ – ಸಮೀಕ್ಷೆ ಲೆಕ್ಕಾಚಾರ
0
SHARES
331
VIEWS
Share on FacebookShare on Twitter

ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣಾ ಫಲಿತಾಂಶ ಜೂನ್ 4ರಂದು ಪ್ರಕಟವಾಗ್ತಿದೆ. ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಯಾವ ಯಾವ ಪಕ್ಷಗಳು ಎಷ್ಟೆಷ್ಟು ಕ್ಷೇತ್ರಗಳನ್ನ ಗೆಲ್ಲಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ ಈಗಾಗಲೇ ದೇಶದ ಪ್ರಮುಖ ಚುನಾವಣಾ ವಿಶ್ಲೇಷಕರು ಅಚ್ಚರಿಯ ಸಮೀಕ್ಷೆಯನ್ನು ಮುಂದಿಟ್ಟಿದ್ದಾರೆ. ಆ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹೀನಾಯವಾಗಿ ಸೋಲಲಿದೆ. ಕಾಂಗ್ರೆಸ್ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬೀಗಲಿದೆ ಎಂದು ಈ ಸಮೀಕ್ಷೆ ಹೇಳ್ತಿದೆ.

ಕರ್ನಾಟಕದಲ್ಲಿ ಈ ಸಮೀಕ್ಷೆ ಪ್ರಕಾರ ಬರೋಬ್ಬರಿ 22 ಕ್ಷೇತ್ರಗಳನ್ನು ಗೆಲ್ಲಲಿದೆ. ಬಿಜೆಪಿ ಜೆಡಿಎಸ್ ದೋಸ್ತಿ ಕೇವಲ 5 ಸೀಟುಗಳನ್ನು ಮಾತ್ರ ಗೆಲ್ಲಲಿದೆ ಎಂದು ಹೇಳಲಾಗ್ತಿದೆ.

ಕಳೆದ ಬಾರಿಯ ಅಂದ್ರೆ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಕಾಂಗ್ರೆಸ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದು, ಕೇವಲ ಒಂದೇ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದ್ದ ಕಾಂಗ್ರೆಸ್ ಈ ಬಾರಿ 21 ಹೆಚ್ಚುವರಿ ಸೀಟುಗಳನ್ನು ಗೆಲ್ಲಲಿದೆ.

ಹಾಗಾದ್ರೆ ಕಾಂಗ್ರೆಸ್ ಗೆಲ್ಲಬಹುದಾದ ಆ 22 ಲೋಕಸಭಾ ಕ್ಷೇತ್ರಗಳು ಯಾವುವು..?

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕಾ ಜಾರಕಿಹೊಳಿ ಗೆದ್ದು ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಪಾಟೀಲ್​ ಸೋಲಲಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸೋತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಾಳ್ಕರ್ ಗೆಲ್ಲಲಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಶಿವಾನಂದ ಪಾಟೀಲ್​ ಪುತ್ರಿ ಸಂಯುಕ್ತಾ ಪಾಟೀಲ್ ಜಯಗಳಿಸಲಿದ್ದಾರೆ.

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಆರ್ ಅಲಗೂರ್ ಗೆಲ್ಲಲಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.

ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಗೆಲ್ಲಲಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ್ ಬಸವರಾಜ ಹಿಟ್ನಾಳ್ ಗೆಲ್ಲಲಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಶ್ರೀರಾಮುಲು ಸೋತು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ತುಕಾರಾಂ ಗೆಲ್ಲಲಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರ ಮಠ ಗೆಲ್ಲಲಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸಹೋದರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಸೋತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​​ಕುಮಾರ್ ಗೆಲ್ಲಲಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಹೆಚ್​ ಡಿ ರೇವಣ್ಣ ಅವರ ಮಗ, ದೇವೇಗೌಡರ ಮೊಮ್ಮಗ ಪ್ರಜ್ವಲ್​ ರೇವಣ್ಣ ಶ್ರೇಯಸ್ ಪಟೇಲ್ ಗೆಲ್ಲಲಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ ಎನ್ ಚಂದ್ರಪ್ಪ ಗೆಲ್ಲಲಿದ್ದಾರೆ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸೋತು ಸ್ಟಾರ್ ಚಂದ್ರು ಗೆಲ್ಲಲಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಕೃಷ್ಣದತ್ತ ಒಡೆಯರ್​ ಸೋತು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಗೆಲ್ಲಲಿದ್ದಾರೆ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಗ ಸುನೀಲ್ ಬೋಸ್ ಗೆಲ್ಲಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಅಳಿಯ, ಕುಮಾರಸ್ವಾಮಿ ಭಾವ ಸಿ ಎನ್​ ಮಂಜುನಾಥ್​ ಸೋತು ಸಂಸದ ಡಿ.ಕೆ ಸುರೇಶ್ ಮತ್ತೆ ಗೆಲ್ಲಲಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೋತು ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ ರಾಜೀವ್ ಗೌಡ ಗೆಲ್ಲಲಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿಸೂರ್ಯ ಸೋತು ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳು ಸೌಮ್ಯರೆಡ್ಡಿ ಗೆಲ್ಲಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲೂ ಕೂಡ ಹಾಲಿ ಸಂಸದ ಪಿ.ಸಿ ಮೋಹನ್ ಸೋತು, ಮನ್ಸೂರ್ ಖಾನ್ ಗೆಲ್ಲಲಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿಜೆಪಿಯ ಡಾ. ಕೆ ಸುಧಾಕರ್ ಸೋತು, ರಕ್ಷಾ ರಾಮಯ್ಯ ಗೆಲ್ಲಲಿದ್ದಾರೆ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ನ ಮಲ್ಲೇಶ್​ ಬಾಬು ಸೋತು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಗೆಲ್ಲಲಿದ್ದಾರೆ.

ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ ಹೊಸದೊಂದು ಇತಿಹಾಸ ಸೃಷ್ಟಿಸಲಿದೆ. ವಿಧಾನಸಭಾ ಚುನಾವಣೆಯಲ್ಲಿ ಎದ್ದಿದ್ದ ಕಾಂಗ್ರೆಸ್ ಬಿರುಗಾಳಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಧೂಳೀಪಟ ಮಾಡಲಿದೆ ಎಂದು ಚುನಾವಣಾ ವಿಶ್ಲೇಷಕ ಸಾಯಿಬ್​ಪಾಲ್​ ಪಂಡಿತ್​ ಅವರು ಚುನಾವಣಾ ಸಮೀಕ್ಷೆಯನ್ನು ಮುಂದಿಟ್ಟಿದ್ದಾರೆ.

ADVERTISEMENT
ADVERTISEMENT
  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
ADVERTISEMENT
Previous Post

ಭಾನುವಾರ ರಜಾ ದಿನ ಮತ್ತು ಪ್ರಧಾನಿ ಮೋದಿ ಅಜ್ಞಾನ..!

Next Post

ದೇವೇಗೌಡರ ಕುಟುಂಬದ ಮೈಂಡ್​ ಗೇಮ್​ – ಶರಣಾಗತಿಯೋ..? ಶರಣಾಗತಿಗೂ ಮೊದಲೇ ಪ್ರಜ್ವಲ್​ ಅರೆಸ್ಟೋ..?

Related Posts

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ
News

ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ

by PratikshanaNews
2nd January 2025
33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
News

ಹೊಸ ವರ್ಷದ 2ನೇ ದಿನದಲ್ಲಿ 4 ಐಎಎಸ್‌ ಅಧಿಕಾರಿಗಳ ವರ್ಗಾವಣೆ

by PratikshanaNews
2nd January 2025
Pic Courtesy: Adi931 Bus Photography
News

ಕೆಎಸ್‌ಆರ್‌ಟಿಸಿ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಮಂಜೂರು

by PratikshanaNews
2nd January 2025
ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ
News

ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ

by PratikshanaNews
2nd January 2025
Next Post
ದೇವೇಗೌಡರ ಕುಟುಂಬದ ಮೈಂಡ್​ ಗೇಮ್​ – ಶರಣಾಗತಿಯೋ..? ಶರಣಾಗತಿಗೂ ಮೊದಲೇ ಪ್ರಜ್ವಲ್​ ಅರೆಸ್ಟೋ..?

ದೇವೇಗೌಡರ ಕುಟುಂಬದ ಮೈಂಡ್​ ಗೇಮ್​ - ಶರಣಾಗತಿಯೋ..? ಶರಣಾಗತಿಗೂ ಮೊದಲೇ ಪ್ರಜ್ವಲ್​ ಅರೆಸ್ಟೋ..?

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!