ADVERTISEMENT
ಕರ್ನಾಟಕದಲ್ಲಿ 16ನೇ ವಿಧಾನಸಭಾ ಚುನಾವಣೆ ಘೋಷಣೆ ಆಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಪ್ರಕಟವಾಗಲಿದೆ.
ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಅಧಿಸೂಚನೆ: ಏಪ್ರಿಲ್ 13ರಂದು ಪ್ರಕಟ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನ: ಏಪ್ರಿಲ್ 20
ನಾಮಪತ್ರಗಳ ಪರಿಶೀಲನೆ: ಏಪ್ರಿಲ್ 21
ನಾಮಪತ್ರ ವಾಪಸ್: ಏಪ್ರಿಲ್ 24 ಕಡೆಯ ದಿನ
ಮತದಾನ: ಮೇ 10
ಮತ ಎಣಿಕೆ/ಫಲಿತಾಂಶ: ಮೇ 13
ಕರ್ನಾಟಕದಲ್ಲಿ 58,282 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿರುವ ಸರಾಸರಿ ಮತದಾರರ ಸಂಖ್ಯೆ 883.
ಈ ಮತಗಟ್ಟೆಗಳ ಪೈಕಿ 29,141 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವೆಬ್ ಮೂಲಕ ಪ್ರಸಾರ ಮಾಡಲಾಗುತ್ತದೆ.
ADVERTISEMENT