ಕರ್ನಾಟಕದಲ್ಲಿ 16ನೇ ವಿಧಾನಸಭಾ ಚುನಾವಣೆ ಘೋಷಣೆ ಆಗಿದೆ. ಮೇ 24ರಂದು ಹಾಲಿ 15ನೇ ವಿಧಾನಸಭಾ ಚುನಾವಣೆಯ ಅವಧಿ ಅಂತ್ಯವಾಗಲಿದ್ದು, ಅದಕ್ಕೂ ಮೊದಲು ಚುನಾವಣಾ ಪ್ರಕ್ರಿಯೆ ಮುಗಿಯಲಿದೆ.
ಈ ಬಾರಿ ಕರ್ನಾಟಕದಲ್ಲಿರುವ ಮತದಾರರು 5 ಕೋಟಿ 21 ಲಕ್ಷ ಮತದಾರರಿದ್ದಾರೆ. ಇವರಲ್ಲಿ 2 ಕೋಟಿ 62 ಲಕ್ಷ ಪುರುಷ ಮತದಾರರಿದ್ದಾರೆ. 2 ಕೋಟಿ 59 ಲಕ್ಷ ಮಹಿಳಾ ಮತದಾರರಿದ್ದಾರೆ.
ಮನೆಯಿಂದಲೇ ಮತದಾನಕ್ಕೆ ಇವರಿಗೆ ಅವಕಾಶ
ಕರ್ನಾಟಕದಲ್ಲಿ 12 ಲಕ್ಷದ 15 ಸಾವಿರ 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. 2.5 ಲಕ್ಷದಷ್ಟು ವಿಕಲಚೇತನ ಮತದಾರರಿದ್ದಾರೆ.
80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನ ಮತದಾರರು ತಮ್ಮ ಮನೆಯಿಂದಲೇ ಮತದಾನ ಮಾಡಬಹುದು. ಅಂದರೆ ಈ ಮತದಾರರ ಮನೆ ಬಾಗಿಲಿಗೆ ಚುನಾವಣಾ ಅಧಿಕಾರಿಗಳು ಮತಯಂತ್ರ ಮೂಲಕ ಬಂದು ಮತ ಚಲಾಯಿಸಲು ಅವಕಾಶ ನೀಡಲಿದ್ದಾರೆ.
ಕರ್ನಾಟಕದಲ್ಲಿ 9 ಲಕ್ಷದ 17 ಸಾವಿರ 18 ವರ್ಷ ಮೇಲ್ಪಟ್ಟ ಮೊದಲ ಬಾರಿಗೆ ಮತ ಹಾಕಲಿರುವ ಯುವ ಮತದಾರರಿದ್ದಾರೆ.
ADVERTISEMENT
ADVERTISEMENT