ಕರ್ನಾಟಕ ಚುನಾವಣೆ: ಕಾಂಗ್ರೆಸ್​ನಿಂದ 4ನೇ ಗ್ಯಾರಂಟಿ ಘೋಷಣೆ – 4ನೇ ಗ್ಯಾರಂಟಿ ಏನು..?

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯದ ಜನತೆಗೆ ತನ್ನ 4ನೇ ಗ್ಯಾರಂಟಿಯನ್ನು ಘೋಷಿಸಿದೆ.

ನಿರುದ್ಯೋಗಿ  ಪದವೀಧರ ಯುವಕರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ನೀಡುವ ವಾಗ್ದಾನ ಮಾಡಿದೆ.

ಜೊತೆಗೆ ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂಪಾಯಿ ನೀಡುವ ಖಚಿತ ಭರವಸೆ ನೀಡಿದೆ.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಯುವ ಶಕ್ತಿ ಸಮಾವೇಶದಲ್ಲಿ ನಾಯಕ ರಾಹುಲ್​ ಗಾಂಧಿ ಮೂರನೇ ಗ್ಯಾರಂಟಿಯನ್ನು ಘೋಷಿಸಿದರು.

ನಿರುದ್ಯೋಗಿ ಯುವಕರಿಗೆ ಕಾಂಗ್ರೆಸ್​ ಸರ್ಕಾರ ಬಂದರೆ ವರ್ಷಕ್ಕೆ 36 ಸಾವಿರ ರೂಪಾಯಿ ಅಂದರೆ 2 ವರ್ಷಕ್ಕೆ 72 ಸಾವಿರ ರೂಪಾಯಿ ನೆರವು ಸಿಗಲಿದೆ.

ಕಾಂಗ್ರೆಸ್​ ಈಗಾಗಲೇ ತನ್ನ ಮೂರು ಗ್ಯಾರಂಟಿಗಳನ್ನು ಘೋಷಿಸಿದೆ.

ಕಾಂಗ್ರೆಸ್​ ಅಧಿಕಾರಕ್ಕೆ ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್​ ಉಚಿತ ವಿದ್ಯುತ್​ ನೀಡುವ ವಾಗ್ದಾನ ಮಾಡಿದೆ.

2ನೇ ಗ್ಯಾರಂಟಿ ಭಾಗವಾಗಿ ಪ್ರತಿ ತಿಂಗಳು ಪ್ರತಿ ಕುಟುಂಬದ ಮಹಿಳೆಯ ಹೆಸರಲ್ಲಿ 2 ಸಾವಿರ ರೂಪಾಯಿ ಅಂದರೆ ವರ್ಷಕ್ಕೆ 24 ಸಾವಿರ, 5 ವರ್ಷಕ್ಕೆ 1 ಲಕ್ಷದ 20 ಸಾವಿರ ರೂಪಾಯಿ ನೀಡುವ ವಾಗ್ದಾನ ಮಾಡಿದೆ.

ಮೂರನೇ ಗ್ಯಾರಂಟಿಯಾಗಿ ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ ನೀಡುವ ವಾಗ್ದಾನ ಮಾಡಿದೆ.