ADVERTISEMENT
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ್ತು ಮುಸಲ್ಮಾನ ನಡುವೆ ದ್ವೇಷ ಸೃಷ್ಟಿಸುವ ಭಾಗವಾಗಿ ಬಿಜೆಪಿ ನಾಯಕರೇ ಹೆಣೆದಿದ್ದ ಉರಿಗೌಡ-ನಂಜೇಗೌಡ ಕಥೆಗೆ ಹಿನ್ನಡೆ ಆಗಿದೆ.
ಬಿಜೆಪಿ ಒಕ್ಕಲಿಗ ನಾಯಕರ ಕಿವಿಹಿಂಡಿದ ಸ್ವಾಮೀಜಿ:
ಉರಿಗೌಡ ಮತ್ತು ನಂಜೇಗೌಡ ಕಥೆ ಹಿಂದಿನ ರೂವಾರಿಗಳೆಂದೇ ಕರೆಸಿಕೊಂಡಿರುವ ಸಿ ಟಿ ರವಿ, ಸಚಿವ ಅಶ್ವತ್ಥ್ ನಾರಾಯಣ ಅವರಿಗೆ ಒಕ್ಕಲಿಗ ಸಮುದಾಯದ ನಿರ್ಮಲಾನಂದ ಸ್ವಾಮೀಜಿ ಅವರು ಕಿವಿಹಿಂಡಿದ್ದಾರೆ.
ಸಿ ಟಿ ರವಿ ಇರಬಹುದು, ಅಶ್ವತ್ಥ್ ನಾರಾಯಣ ಇರಬಹುದು, ಗೋಪಾಲಯ್ಯ ಇರಬಹುದು ಅಥವಾ ಈ ವಿಚಾರದಲ್ಲಿ ಯಾರೆಲ್ಲ ಮಾತಾಡ್ತಿದ್ದಾರೋ ಅವರಿಗೆಲ್ಲ ಇತಿಹಾಸದ ಸರಿಯಾದ ಹಿನ್ನೆಲೆ ಮನದಟ್ಟು ಮಾಡಿಕೊಟ್ಟಿರುವುದರಿಂದ ಅವರು ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಅಂತ ಭಾವಿಸ್ತೀನಿ. ಕಲ್ಪನೆ ಮಾಡ್ಕೊಂಡು ಬರೆಯುವುದು ಕಾದಂಬರಿ ಆಗುತ್ತೆ. ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಬರೆದಿದ್ದು ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ. ಅಂತಹ ಯಾವುದೂ ಕೂಡಾ ಇದುವರೆಗೆ ಕಂಡುಬಾರದೇ ಇದ್ದುದ್ದರಿಂದ ಇಂತಹ ಹೇಳಿಕೆಗಳ ಮೂಲಕ ಯುವಕರಲ್ಲಿ, ಸಮಕಾಲಿನ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಾರದು
ಎಂದು ಸ್ವಾಮೀಜಿ ಅವರು ಪ್ರತಿಕ್ರಿಯಿಸಿದ್ದಾರೆ.
ಮುಹೂರ್ತಕ್ಕೂ ಮೊದಲೇ ಚಿತ್ರ ಕೈಬಿಟ್ಟ ಸಚಿವ ಮುನಿರತ್ನ:
ಇನ್ನು ಸಚಿವ ಆರ್ ಅಶೋಕ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅರ್ಪಿಸುವ , ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರ ಚಿತ್ರಕಥೆ ಇರುವ ಉರಿಗೌಡ-ನಂಜೇಗೌಡ ಅವರ ಸಿನಿಮಾ ನಿರ್ಮಿಸಲು ಹೊರಟ್ಟಿದ್ದ ಸಚಿವ, ಸಿನಿಮಾ ನಿರ್ಮಾಪಕ ಮುನಿರತ್ನಗೆ ಮುಖಭಂಗವಾಗಿದೆ.
ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಆದ ಬಳಿಕ ನಿರ್ಮಾಪಕ ಮುನಿರತ್ನ ಸಿನಿಮಾ ನಿರ್ಮಾಣ ನಿರ್ಧಾರವನ್ನು ಕೈಬಿಟ್ಟಿದ್ದಾರೆ.
ಮೇ 14ರಂದು ಚಿತ್ರೀಕರಣಕ್ಕೆ ಮುಹೂರ್ತ ಮಾಡ್ಬೇಕು ಅಂದುಕೊಂಡಿದ್ದೆ. ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದ್ದಲ್ಲ. ನಾನು ಸ್ವಾಮೀಜಿ ಅವರಿಗೆ ಮಾತು ಕೊಟ್ಟಿದ್ದೇನೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಮಾಡಲ್ಲ
ಎಂದು ಸ್ವಾಮೀಜಿ ಭೇಟಿ ಬಳಿಕ ಮುನಿರತ್ನ ಅವರು ಪ್ರತಿಕ್ರಿಯಿಸಿದ್ದಾರೆ.
ADVERTISEMENT