ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​, She Toilet, ಮಹಿಳೆಯರಿಗೆ ಜಿಮ್​, ಸರ್ಕಾರಿ ಥಿಯೇಟರ್​ – ಬಜೆಟ್​ ಘೋಷಣೆಗಳು

Basavaraj Bommai
CM Basavaraj Bommai
ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್​​ಪಾಸ್​ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್​ನಲ್ಲಿ ಘೋಷಿಸಿದ್ದಾರೆ.
ತೀರ್ಥಹಳ್ಳಿ ಕೃಷಿ ಕೇಂದ್ರಕ್ಕೆ 10 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.
ಯುವಕರು ಮತ್ತು ಮಹಿಳೆಯರಿಗೆ ಉಚಿತ್​ ಜಿಮ್​ ಸೌಲಭ್ಯ ಕಲ್ಪಿಸುವ ಯೋಜನೆಯನ್ನೂ ಪ್ರಕಟಿಸಲಾಗಿದೆ.
ಶಿವಮೊಗ್ಗ, ಕಲಬುರಗಿಯಲ್ಲಿ ಚಿಕಿತ್ಸಾ ಕೇಂದ್ರ, 165 ಕೋಟಿ ರೂ. ವೆಚ್ಚದಲ್ಲಿ 10 ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭ.
202 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ, ಮೈಸೂರಿನಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಆಸ್ಪತ್ರೆ.
ರಾಯಚೂರಿನಲ್ಲಿ ಏಮ್ಸ್‌ ಮಾದರಿಯ ಆಸ್ಪತ್ರೆ. 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಕೊಡಗು, ಕಾರವಾರದಲ್ಲಿ 450 ಹಾಸಿಗೆ ಆಸ್ಪತ್ರೆ ನಿರ್ಮಾಣ.
ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘She Toilet’ ನಿರ್ಮಾಣ. ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು SOS ಸೌಲಭ್ಯಗಳು ಇತ್ಯಾದಿಯನ್ನು ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಾಣ.
45 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ 1800 ಕೋಟಿ ರೂ. ಸಾಲ ಸೌಲಭ್ಯ. ಮಹಿಳೆಯರ ಅಪೌಷ್ಟಿಕತೆ ನಿವಾರಣೆಗೆ 100 ಕೋಟಿ ರೂ. ಮಕ್ಕಳ ಆರೋಗ್ಯ ತಪಾಸಣೆಗಾಗಿ ವಾತ್ಸಲ್ಯ ಯೋಜನೆ ಘೋಷಿಸಲಾಗಿದೆ.
ಬೆಂಗಳೂರು ನಗರದಲ್ಲಿ ಕನ್ನಡ ಮಾತೆ ‘ಶ್ರೀ ಭುವನೇಶ್ವರಿ’ ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅಭಿವೃದ್ಧಿ. ‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡ ಜಾನಪದ ಹಬ್ಬ ಆಯೋಜನೆ.
ಹಿಂದುಳಿದ ವರ್ಗಗಳ 11 ಅಭಿವೃದ್ಧಿ ನಿಗಮಗಳಿಗೆ 569 ಕೋಟಿ ರೂ. ಘೋಷಿಸಿದೆ.
ಕನ್ನಡ ಚಲನಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ಟೈಯರ್‌ 2 ನಗರಗಳಲ್ಲಿ 100 ರಿಂದ 200 ಆಸನಗಳ ವ್ಯವಸ್ಥೆಯುಳ್ಳ ಮಿನಿ ಥಿಯೇಟರ್‌ಗಳ ಸ್ಥಾಪನೆ.

LEAVE A REPLY

Please enter your comment!
Please enter your name here