ಕಳೆದ ವರ್ಷ ಘೋಷಿಸಿದ್ದ ಯೋಜನೆ ಈ ಬಜೆಟ್​ನಲ್ಲಿ ಮತ್ತೆ ಘೋಷಣೆ

ಉಚಿತ್​ ವಿದ್ಯುತ್​ ಪ್ರಮಾಣವನ್ನು 40ರಿಂದ 75 ಯುನಿಟ್​​ಗೆ ಹೆಚ್ಚಿಸಿ ಕಳೆದ ವರ್ಷ ಮಾಡಿದ್ದ​ ಘೋಷಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಈ ಬಾರಿ ತಮ್ಮ ಬಜೆಟ್​ನಲ್ಲಿ ಮತ್ತೆ ಘೋಷಿಸಿದ್ದಾರೆ.
ಎಸ್​ಸಿ/ಎಸ್​ಟಿ ಸಮುದಾಯಕ್ಕೆ ತಿಂಗಳಿಗೆ 40 ಯುನಿಟ್​ ಬದಲು 75 ಯುನಿಟ್​ ಉಚಿತ ವಿದ್ಯುತ್​ ನೀಡುವುದಾಗಿ ಇವತ್ತಿನ ಬಜೆಟ್​ನಲ್ಲಿ ಘೋಷಿಸಿದ್ದಾರೆ.
ಕಳೆದ ವರ್ಷದ ಮಾರ್ಚ್​​ ತಿಂಗಳಲ್ಲಿ ಬೊಮ್ಮಾಯಿ ಸರ್ಕಾರ ಎಸ್​ಸಿ-ಎಸ್​ಟಿ ಸಮುದಾಯಕ್ಕೆ 75 ಯುನಿಟ್​ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಿತ್ತು.
2017ರಲ್ಲಿ ಅಂದರೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಾರಿಯಾಗಿದ್ದ ಯೋಜನೆ ಭಾಗ್ಯ ಜ್ಯೋತಿ ಅಥವಾ ಕುಟೀರ ಜ್ಯೋತಿ ಯೋಜನೆಯಡಿಯಲ್ಲಿ ಎಸ್​ಸಿ-ಎಸ್​ಟಿ ಸಮುದಾಯಕ್ಕೆ ತಿಂಗಳಿಗೆ 40 ಯುನಿಟ್​ ಉಚಿತ ವಿದ್ಯುತ್​ನ್ನು ಪಡೆಯುತ್ತಿತ್ತು.
ಬಿಜೆಪಿ ಸರ್ಕಾರ ಕಳೆದ ವರ್ಷ ಘೋಷಿಸಿರುವ ಮತ್ತು ಈ ವರ್ಷ ಬಜೆಟ್​ನಲ್ಲಿ ಮತ್ತೆ ಪ್ರಕಟಿಸಿರುವ ಉಚಿತ ವಿದ್ಯುತ್​ ಯೋಜನೆಯಡಿ ಎಸ್​ಸಿ-ಎಸ್​ಟಿ ಸಮುದಾಯಕ್ಕೆ ಹಾಲಿ ಇರುವ 40 ಯುನಿಟ್​ಗಳ ಉಚಿತ ವಿದ್ಯುತ್​ ಪ್ರಮಾಣ 35 ಯುನಿಟ್​ನಷ್ಟು ಹೆಚ್ಚಳ ಆಗಲಿದೆ.
ಈ ಯೋಜನೆಯಿಂದ 1.46 ಕೋಟಿ ಕುಟುಂಬಗಳಿಗೆ ನೆರವಾಗಲಿದ್ದು, ಸರ್ಕಾರಕ್ಕೆ 979 ಕೋಟಿ ರೂಪಾಯಿ ಹೊರೆಯಾಗಲಿದೆ.

LEAVE A REPLY

Please enter your comment!
Please enter your name here