ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಬಜೆಟ್ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಮೇಲಿನ ಸುಂಕ ಇಳಿಕೆ ಬಗ್ಗೆ ಘೋಷಣೆ ಮಾಡಿಲ್ಲ.
ಕಡಿಮೆ ಸಂಬಳ ಪಡೆಯುವ ನೌಕರರಿಗೆ ವೃತ್ತಿ ತೆರಿಗೆ ವಿನಾಯಿತಿ ಮಿತಿಯನ್ನು 15 ಸಾವಿರ ರೂಪಾಯಿಗಳಿಂದ 25 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಜಿಎಸ್ಟಿ ಜಾರಿಗೂ ಮೊದಲು ಬಾಕಿ ಇದ್ದ ಪೂರ್ಣ ತೆರಿಗೆಯನ್ನು ಪಾವತಿಸುವ ವರ್ತಕರಿಗೆ ದಂಡ ಮತ್ತು ಬಡ್ಡಿ ವಿನಾಯಿತಿಯನ್ನು ಘೋಷಿಸಲಾಗಿದೆ.
ಬಾಕಿ ಸಾರಾಯಿ ಮತ್ತು ಸೇಂದಿ ಬಾಡಿಗೆ ಮೂಲಧನವನ್ನು ಈ ವರ್ಷದ ಜೂನ್ಗೂ ಮೊದಲು ಪಾವತಿಸಿದರೆ ದಂಡ ಮತ್ತು ಬಡ್ಡಿ ಪಾವತಿಯಲ್ಲಿ ಕರ ಸಮಾಧಾನ ಪರಿಹಾರವನ್ನು ಘೋಷಿಸಲಾಗಿದೆ.
ADVERTISEMENT
ADVERTISEMENT