ಇಸ್ರೇಲ್ ಮತ್ತು ಭಯೋತ್ಪಾದಕ ಸಂಘಟನೆ ಹಮಾಸ್ ಪರಸ್ಪರ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎರಡೂ ಕಡೆಯವರು ನಾಲ್ಕು ದಿನಗಳ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿದ್ದು, ಈ ಯುದ್ಧ ವಿರಾಮದ ಅವಧಿಯಲ್ಲಿ ಹಮಾಸ್ ಗಾಜಾದಲ್ಲಿ ಬಂಧಿಯಾಗಿ ಇಟ್ಟುಕೊಂಡಿರುವ ೫೦ ಮಂದಿಯನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡಿದೆ.
ಇದೇ ವೇಳೆ ಇಸ್ರೇಲ್ ಕೂಡಾ ತನ್ನ ಬಂಧನದಲ್ಲಿರುವ ೧೫೦ ಮಂದಿ ಪ್ಯಾಲೆಸ್ತೀನಿಗಳನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿದೆ.
ಅಲ್ಲದೇ ಗಾಜಾ ಪಟ್ಟಿಯಲ್ಲಿ ಮಾನವೀಯ ನೆರವುಗಳ ಪೂರೈಕೆಗೆ ಈ ನಾಲ್ಕು ದಿನಗಳ ಅವಧಿಯಲ್ಲಿ ಎರಡೂ ಕಡೆಯವರು ಅವಕಾಶ ಮಾಡಿಕೊಡಲಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಇಸ್ಲಾಮಿಕ್ ರಾಷ್ಟ್ರ ಕತಾರ್ ನಡೆಸಿರುವ ಸಂಧಾನ ತಾತ್ಕಾಲಿಕ ಯಶಸ್ವಿಯಾಗಿದೆ. ಅಮೆರಿಕ ಕೂಡಾ ಇಂಥದ್ದೊಂದು ಯುದ್ಧ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಇಸ್ರೇಲ್ ಮತ್ತು ಹಮಾಸ್ ಮೇಲೆ ಒತ್ತಡ ಹೇರಿತ್ತು.
೨೦೦ ಮಂದಿ ಇಸ್ರೇಲ್ ನಾಗರಿಕರು ಹಮಾಸ್ ವಶದಲ್ಲಿದ್ದಾರೆ.
೪ ದಿನಗಳ ಯುದ್ಧ ವಿರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ೫೦ ಮಂದಿಯನ್ನು ಬಿಡುಗಡೆಗೊಳಿಸಲಾಗುತ್ತದೆ.
ಪ್ರತಿ ೧೦ ಮಂದಿಯ ಬಿಡುಗಡೆಯಾದರೆ ಒಂದೊಂದು ದಿನವೂ ಕದನ ವಿರಾಮ ವಿಸ್ತರಣೆ ಆಗಲಿದೆ ಎಂದು ಇಸ್ರೇಲ್ ಹೇಳಿದೆ.
ADVERTISEMENT
ADVERTISEMENT