* ಶಕ್ತಿಶಾಲಿ –ತುಂಬಾ ಚಿಕ್ಕದಾದ ಇರುವೆಗಳು ತಮಗಿಂತ 50ಪಟ್ಟು ಭಾರದ.. ಕೆಲವು ಜಾತಿಯ ಇರುವೆಗಳು ನೂರು ಪಟ್ಟು ಭಾರ ಹೊತ್ತು ಸಾಗುತ್ತವೆ
* ಅತ್ಯಂತ ಬಲಿಷ್ಠನಾದ ಮನುಷ್ಯ ಕೂಡ ತನಗಿಂತ ಎರಡೂವರೆ ಪಟ್ಟು ಭಾರವನ್ನು ಮಾತ್ರ ಹೊತ್ತೊಯ್ಯಬಲ್ಲ
* ನಿದ್ದೆ ಹೋಗಲ್ಲ – ಉಳಿದ ಪ್ರಾಣಿಗಳಂತೆ ಇರುವೆಗಳು ನಿದ್ದೆ ಹೋಗಲ್ಲ. 12 ಗಂಟೆಗಳಿಗೊಮ್ಮೆ 8 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತವೆ.
* ಬೆಸ್ಟ್ ಎಂಜಿನಿಯರ್ಸ್ – ಇರುವೆಗಳು ಅತ್ಯುತ್ತಮ ಎಂಜಿನಿಯರ್‌ಗಳು.. ಏರ್ ಕಂಡೀಷನ್ ಅಗತ್ಯವಿಲ್ಲದ ಭವನಗಳನ್ನು ನಿರ್ಮಿಸಲು ಇರುವೆಗಳ ಗೂಡುಗಳನ್ನು ಮಾದರಿಯನ್ನಾಗಿ ಎಂಜಿನಿಯರ್‌ಗಳು ಪರಿಗಣಿಸುತ್ತಾರೆ.
* ಇರುವೆಗಳು ಭೂಮಿಯ ಒಳಗೆ, ಭೂಮಿಯ ಮೇಲ್ಭಾಗ ಕೂಡ ಎರಡು ಅಂತಸ್ತಿನಷ್ಟು ಗೂಡುಗಳನ್ನು ಗಾಳಿಯಾಡುವ ರೀತಿಯಲ್ಲಿ ನಿರ್ಮಿಸುತ್ತವೆ.. ಮಳೆ ಬಿದ್ದರೂ ಗೂಡು ಬೀಳದಷ್ಟು ಅದರ ಗೋಡೆಗಳು ಬಲಿಷ್ಠವಾಗಿ ಇರುತ್ತವೆ.
* ಗೂಡುಗಳ ಗೋಡೆ ನಿರ್ಮಾಣಕ್ಕೆ ಮರಳಿನ ಜೊತೆ ಕಡ್ಡಿಗಳನ್ನು ಬಳಸುತ್ತವೆ. ಗೂಡಿನ ಒಳಗೆ ಮೊಟ್ಟೆ ಇಡಲು, ಆಹಾರ ಗೋದಾಮು, ವಿಶ್ರಾಂತಿ ಕೊಠಡಿಗಳನ್ನು ಪ್ರತ್ಯೇಕವಾಗಿ ನಿರ್ಮಿಸುತ್ತವೆ.
* ಇರುವೆಗಳಿಗೂ ಸಾಕುಪ್ರಾಣಿಗಳು ಇರುತ್ತವೆ – ಮನುಷ್ಯರು ಕೋಳಿ, ಮೇಕೆಗಳನ್ನು ಸಾಕಿಕೊಂಡು ಆಹಾರಕ್ಕೆ ಬಳಸಿಕೊಳ್ಳುವಂತೆ ಇರುವೆಗಳು ಎಫಿಡ್ಸ್ ಎಂಬ ಕೀಟಗಳನ್ನು ಬೆಳಸುತ್ತವೆ. ಆಹಾರ ಸಿಗದ ಸಂದರ್ಭದಲ್ಲಿ ಅವುಗಳನ್ನು ತಿನ್ನುತ್ತವೆ. ಕೆಲ ಜಾತಿಯ ಇರುವೆಗಳು ಫಂಗಸ್ ಬೆಳೆ ಕೂಡ ಬೆಳೆಯುತ್ತವೆ.
* ಅಂತ್ಯಕ್ರಿಯೆ ಮತ್ತು ಸ್ಮಶಾನ – ಇರುವೆಗಳು ಆಹಾರವನ್ನು ಮಾತ್ರ ಸಾಗಿಸಲ್ಲ.. ಸಹೋದ್ಯೋಗಿ ಇರುವೆ ಸಾವನ್ನಪ್ಪಿದ ಸಂದರ್ಭದಲ್ಲಿ ಆ ಇರುವೆಯನ್ನು ಹೊತ್ತು ಸಾಗಿಸುತ್ತವೆ. ಇರುವೆ ಗೂಡಿನ ಪಕ್ಕದಲ್ಲಿರುವ ಪ್ರತ್ಯೇಕ ಸ್ಥಳವನ್ನು ಸ್ಮಶಾನದ ರೀತಿ ಬಳಸಿಕೊಳ್ಳುತ್ತವೆ.
* ರೌಡಿ ಇರುವೆಗಳು ಮತ್ತು ದಾಸ್ಯ – ಕೆಲ ಇರುವೆಗಳು ಪಕ್ಕದ ಇರುವೆ ಗೂಡಿನ ಮೇಲೆ ದಾಳಿ ನಡೆಸುತ್ತವೆ. ಅಲ್ಲಿನ ಇರುವೆಗಳನ್ನು ದಾಸರನ್ನಾಗಿ ಮಾಡಿಕೊಳ್ಳುತ್ತವೆ. ತಮಗೆ ಬೇಕಾದ ಕೆಲಸಗಳನ್ನು ಆ ಇರುವೆಗಳಿಂದ ಮಾಡಿಸಿಕೊಳ್ಳುತ್ತವೆ.
* ಇರುವೆ ಆಯಸ್ಸು – ಸಣ್ಣ ಗಾತ್ರದ ಕೀಟಗಳಲ್ಲಿ ಇರುವೆ ದೀರ್ಘಾಯುಷಿ.. ಸಾಮಾನ್ಯ ಇರುವೆ ಒಂದು ವರ್ಷದ ಮೇಲ್ಪಟ್ಟು ಬದುಕುತ್ತದೆ. ಆದರೆ, ರಾಣಿ ಇರುವೆ ತುಂಬಾ ವರ್ಷ ಜೀವಿಸುತ್ತದೆ. ಅದು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಇಡೀ ಗೂಡಿನಲ್ಲಿರುವ ಎಲ್ಲಾ ಇರುವೆಗಳು ಸಾವನ್ನಪ್ಪುತ್ತವೆ.
* ಮಾಂಸಕ್ಕಿಂತ ದುಬಾರಿ – ತುಂಬಾ ಕಡೆ ಇರುವೆಗಳನ್ನು ಆಹಾರವನ್ನಾಗಿ ಬಳಸುತ್ತಾರೆ. ಇವುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಿರುತ್ತವೆ. ಥಾಯ್ಲೆಂಡ್, ಕೊಲಂಬಿಯಾದಂತಹ ದೇಶಗಳಲ್ಲಿ ಇವುಗಳನ್ನು ಪ್ರೊಸೆಸ್ ಮಾಡಿ ಮಾಂಸಕ್ಕಿಂತ ದುಬಾರಿ ದರದಲ್ಲಿ ವಿಕ್ರಯಿಸುತ್ತಾರೆ.
* ಚಾಕ್ಲೇಟ್ ಗಳಲ್ಲಿ ಇರುವೆ – ಕ್ಯಾಂಡಿ, ಲಾಲಿ ಪಪ್, ಚಾಕ್ಲೆಟ್, ವೇಫರ್ಸ್‌ಗಳನ್ನು ಇರುವೆಗಳನ್ನು ಬಳಸಿ ತಯಾರಿಸಲಾಗುತ್ತದೆ.