ಜಗತ್ತಿನ ವಿವಿಧ ದೇಶಗಳನ್ನು ಆಳುತ್ತಿರುವ ಭಾರತೀಯರ ಪಟ್ಟಿ ಇಲ್ಲಿದೆ ನೋಡಿ

* ರಿಷಿ ಸುನಾಕ್ – ಬ್ರಿಟನ್ ಹೊಸ ಪ್ರಧಾನಿ.. ವಯಸ್ಸು 42.. ಅತೀ ಕಿರಿಯ ಪ್ರಧಾನಿ ಎಂಬ ಗರಿಮೆ.. ಪಂಜಾಬ್ ಮೂಲದ ಪೂರ್ವಿಕರು.. ತಂದೆ ಕೀನ್ಯಾದಲ್ಲಿ.. ತಾಯಿ ಟಾಂಜೇನಿಯಾದಲ್ಲಿ ಜನನ.. ರಿಶಿ ಪೋಷಕರು 1960ರಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ.. ಸೌಥಾಂಪ್ಟನ್‌ನಲ್ಲಿ ಜನನ. ಇನ್ಫೊಸಿಸ್ ನಾರಾಯಣಮೂರ್ತಿ – ಸುಧಾಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿಯನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ರಿಶಿ-ಅಕ್ಷತಾ ದಂಪತಿಗೆ ಕೃಷ್ಣಾ-ಅನೌಷ್ಕಾ ಪುತ್ರಿಯರು.

* ಆಂಟೋನಿಯೋ ಕೋಸ್ಟಾ – ಪೋರ್ಚುಗಲ್ ಪ್ರಧಾನಿ..  ಗೋವಾ ಮೂಲ… ಆಂಟೋನಿಯಾ ತಂದೆ ಅರ್ನಾಲ್ಡೋ ಕೋಸ್ಟಾ ಗೋವಾದವರು.

* ಮಹ್ಮದ್ ಇರ್ಫಾನ್ – ಗಯಾನ ಅಧ್ಯಕ್ಷ ..  ಇಂಡೋ-ಗಯಾನಾ ಮುಸ್ಲಿಂ ಕುಟುಂಬದಲ್ಲಿ ಜನನ.. 2020ರಲ್ಲಿ ಗಯಾನ ಅಧ್ಯಕ್ಷರಾಗಿ ಆಯ್ಕೆ

* ಪ್ರವೀಂದ್ ಜಗನ್ನಾಥ್ – ಮಾರಿಷಸ್ ಪ್ರಧಾನಿ.. ಭಾರತ ಮೂಲದ ಹಿಂದೂ ಕುಟುಂಬದ ವ್ಯಕ್ತಿ..  2021ರಲ್ಲಿ ಮಾರಿಷಸ್ ಪ್ರಧಾನಿಯಾಗಿ ಆಯ್ಕೆ.

* ಪೃಥ್ವಿರಾಜ್ ರೂಪುನ್ – ಮಾರಿಷಸ್ ಅಧ್ಯಕ್ಷ..  ಭಾರತದ ಆರ್ಯ ಸಮಾಜ್ ಹಿಂದೂ ಕುಟುಂಬ.. ಹಿರಿಯ ರಾಜಕಾರಣಿ.. 2019ರಲ್ಲಿ ಅಧ್ಯಕ್ಷರಾಗಿ ಆಯ್ಕೆ

* ಚಂದ್ರಿಕಾ ಪ್ರಸಾದ್ ಸಂತೋಖಿ – ಸುರಿನಾಮ್ ಅಧ್ಯಕ್ಷ..  ದಕ್ಷಿಣ ಅಮೆರಿಕಾದ ದೇಶ ಸುರಿನಾಮ್ ಅಧ್ಯಕ್ಷ.. ಭಾರತ ಮೂಲದ ಕುಟುಂಬದಲ್ಲಿ 1959ರಲ್ಲಿ ಜನನ

* ಕಮಲಾ ಹ್ಯಾರೀಸ್ – ಅಮೆರಿಕಾ ಉಪಾಧ್ಯಕ್ಷೆ..  ಭಾರತೀಯ ಮೂಲ.. ತಮಿಳುನಾಡಿನ ತುಳಸೇಂದ್ರಿಪುರ ಮೂಲದ ಪೂರ್ವಿಕರು.. ತಾಯಿ ಶ್ಯಾಮಲಾ ಗೋಪಾಲನ್..