ಭಾರತದಲ್ಲಿ ವಾಸ್ತವತೆ ಎಂದರೆ ಭ್ರಷ್ಟಾಚಾರ, ಕೊಳಕು ರಸ್ತೆಗಳು, ಮಾಲಿನ್ಯ ಮತ್ತು ಹಲವು ಸಂದರ್ಭಗಳಲ್ಲಿ ವಿದ್ಯುತ್ ಇಲ್ಲದೇ ಇರುವುದು
ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಹೇಳಿದ್ದಾರೆ.
ಸಿಂಗಾಪುರದಲ್ಲಿ ವಾಸ್ತವತೆ ಎಂದರೆ ಸ್ವಚ್ಛ ರಸ್ತೆಗಳು, ಮಾಲಿನ್ಯ ಇಲ್ಲದೇ ಇರುವುದು, ಅಗಾಧ ವಿದ್ಯುಚ್ಛಕ್ತಿ
ಎಂದೂ ನಾರಾಯಣಮೂರ್ತಿ ಅವರು ಭಾರತದೊಂದಿಗೆ ಸಿಂಗಾಪುರವನ್ನು ಹೋಲಿಸಿ ಭಾರತದ ವಾಸ್ತವತೆಯನ್ನು ತೆರೆದಿಟ್ಟಿದ್ದಾರೆ.
ನಿಮ್ಮ ಜವಾಬ್ದಾರಿ ಏನೆಂದರೆ ಹೊಸ ವಾಸ್ತವತೆಯನ್ನು ಸೃಷ್ಟಿಸುವುದು
ಎಂದು ಆಂಧ್ರಪ್ರದೇಶದಲ್ಲಿರುವ ಜಿಎಂಆರ್ಐಟಿ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾರಾಯಣಮೂರ್ತಿ ಅವರು ಭಾಷಣ ಮಾಡಿದ್ದಾರೆ.
ಬಡತನ ನಿರ್ಮೂಲನೆಗೆ ಉದ್ಯೋಗ ಸೃಷ್ಟಿಯೊಂದೇ ಪರಿಹಾರ
ಎಂದು ಜಿಎಂಆರ್ಐಟಿ ಸಂಸ್ಥೆ ಅಮೃತ ಮಹೋತ್ಸವ ಸಮಾರಂಭದಲ್ಲಿ ನಾರಾಯಣಮೂರ್ತಿ ಅವರು ಹೇಳಿದ್ದಾರೆ.
ADVERTISEMENT
ADVERTISEMENT