ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದಾನೆ.
ತಪ್ಪೇನೂ ಇಲ್ಲ ಚಿನ್ನ, ಪರ್ವಾಗಿಲ್ಲ ಎನ್ನುವ ಮೂಲಕ ದರ್ಶನ್ ಮೇಲೆ ಚಪ್ಪಲಿ ಎಸೆದವನಿಗೂ ಒಳ್ಳೆದು ಬಯಸಿ ದೊಡ್ಡತನ ಮೆರೆದಿದ್ದಾರೆ.
ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಬಳಿಕ ಈಗ ಡಿಬಾಸ್ ಅಭಿಮಾನಿಗಳು ಇದು ಅಪ್ಪು ಅವರ ಅಭಿಮಾನಿಗಳ ಕೃತ್ಯ ಎಂದು ಕಿಡಿಕಾರಿದ್ದಾರೆ.
ರಾಜಕುಮಾರ್ ವಂಶದ ಮೇಲಿದ್ದ ಅಭಿಮಾನ ಇವತ್ತಿಗೆ ಮುಕ್ತಾಯವಾಯ್ತು. ಬೇರೊಬ್ಬರ ಯಶಸ್ಸನ್ನು ಸಹಿಸದ ನಿಮ್ಮ ಅಭಿಮಾನಿಗಳಿಗೆ ನನ್ನ ಧಿಕ್ಕಾರವಿರಲಿ. @dasadarshan sir ನಿಮ್ಮೊಂದಿಗೆ ನಾವು ಇದ್ದಿವಿ.
ಎಂದು ವಕೀಲರಾದ ಕುಮಾರಸ್ವಾಮಿ ಬಿ ಎನ್ ಅವರು ಬರೆದುಕೊಂಡಿದ್ದಾರೆ.
ದೊಡ್ಡ ಮನೆ ದೊಡ್ಡ ಮಗ @NimmaShivannaರವರು ನಿನ್ನೆ ಚಾಲೆಂಜಿಂಗ್ ಸ್ಟಾರ್ ಡಿ.ಬಾಸ್ @dasadarshan ರವರ ಮೇಲೆ ನಡೆದ ಘಟನೆಯ ಬಗ್ಗೆ ಮಾತನಾಡಬೇಕು
ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮತ್ತು ಕೆಪಿಸಿಸಿ ಮಾಜಿ ಸದಸ್ಯ ಶ್ರೀನಿವಾಸ್ ಎಸ್ಪಿ ಅವರು ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಅವರ ಅಭಿಮಾನಿಗಳಲ್ಲಿ ಕೆಲವರಂತೂ ನೇರವಾಗಿ ದೊಡ್ಮನೆಯನ್ನೇ ಟಾರ್ಗೆಟ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿದ್ದಾರೆ.
ಅಭಿಮಾನಿಗಳ ಕೆಲವು ಪೋಸ್ಟ್ಗಳು: