ದಿನಗಳು ಉರುಳಿದಂತೆ ಚರ್ಮ ಸುಕ್ಕಾಗಬಹುದು. ಮುಖಕಾಂತಿ ಕುಗ್ಗಬಹುದು. ಸೌಂದರ್ಯದ ಮಾಸಬಹುದು. ಆದರೆ ಸೌಂದರ್ಯ ವೃದ್ಧಿ ಎಂಬ ಉದ್ಯಮ ಕ್ಷೇತ್ರದ ಚೆಲುವು ಕುಂದುವುದಿಲ್ಲ. ಅದು ವರ್ಷದಿಂದ ವರ್ಷಕ್ಕೆ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ದಿನದಿಂದ ದಿನಕ್ಕೆ ಹೊಸ ಮೆರುಗು ಪಡೆದುಕೊಳ್ಳುತ್ತಿರುವ ಈ ಸೌಂದರ್ಯ ರಕ್ಷಣೆ ಸಾಮಗ್ರಿಗಳ ತಯಾರಿಕೆ ಮತ್ತು ಮಾರಾಟದ ಕ್ಷೇತ್ರ ತನ್ನದೇ ಬ್ರ್ಯಾಂಡ್ ಸೃಷ್ಟಿಸಿರುವ ‘ಬ್ಯೂಟಿ ಅಂಡ್ ಬಿಯಾಂಡ್’ (Beauty And Beyond) ಎರಡನೇ ಶಾಪ್ ಈಗ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭವಾಗಿದೆ.
ಮೇಕಪ್, ಸುಗಂಧ ದ್ರವ್ಯ, ಹೇರ್ ಕೇರ್, ಬಾಡಿಕೇರ್ ಹೀಗೆ ಸೌಂದರ್ಯ ಆರೈಕೆ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಬ್ಯೂಟಿ ಅಂಡ್ ಬಿಯಾಂಡ್ ತನ್ನದೇ ಒಂದು ವ್ಯಾಲ್ಯೂ ಸೃಷ್ಟಿಸಿದೆ. ಹೈದ್ರಾಬಾದ್ ನಲ್ಲಿ ಮೊದಲು ಆರಂಭವಾದ ಈ ಶಾಪ್, ಆ ನಂತರ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ತನ್ನ ಹೊಸ ಶಾಖೆಯನ್ನು ತೆರೆದಿತ್ತು. ಇಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಎರಡನೇ ಶಾಪ್ ನ್ನು ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭಿಸಿದೆ. ದಕ್ಷಿಣ ಭಾರತದ ಖ್ಯಾತ ನಟಿ ಧನ್ಯ ಬಾಲಕೃಷ್ಣ (Actress Dhanya Balakrishna) ಈ ಬ್ರ್ಯಾಂಡ್ ಶಾಪ್ ನ್ನು ಉದ್ಘಾಟಿಸಿದರು.
ಇದನ್ನೂ ಓದಿ : ಬೋಲ್ಡ್ ಅವತಾರದಲ್ಲಿ ಮಿಂಚಿದ ದಿಯಾ ನಟಿ ಖುಷಿ
ಧನ್ಯ ಬಾಲಕೃಷ್ಣ (Actress Dhanya Balakrishna) ಮಾತನಾಡಿ, ಬ್ಯೂಟಿ ಅಂಡ್ ಬಿಯಾಂಡ್ (Beauty And Beyond) ಮೊದಲ ಸ್ಟೋರ್ ಹೈದ್ರಾಬಾದ್ ನಲ್ಲಿ ಲಾಂಚ್ ಆಗಿದ್ದು, ಇದಾದ ನಂತರ ಬೆಂಗಳೂರಿನ ಕಮರ್ಷಿಲ್ ಸ್ಟ್ರೀಟ್ ನಲ್ಲಿ ಈಗ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಲಾಂಚ್ ಮಾಡಲಾಗಿದೆ. ತುಂಬಾ ಸಂತೋಷವಾಗುತ್ತಿದೆ. ಇಲ್ಲಿರುವ ಎಲ್ಲಾ ಬ್ರ್ಯಾಂಡ್ ಒನ್ ಸ್ಟಾಪ್ ಸಲ್ಯೂಷನ್ ತರ. ಎಲ್ಲಾ ಲಕ್ಷೂರಿ ಬ್ರ್ಯಾಂಡ್ ಗಳನ್ನು ಒಂದೇ ಕಡೆ ಕೊಂಡುಕೊಳ್ಳಬಹುದು. ಕೆ ಬ್ಯೂಟಿ, ರೆಬಲಾನ್ ಅವರ ಸ್ವತಃ ಬ್ರ್ಯಾಂಡ್ ಕೂಡ ಇಲ್ಲಿ ದೊರೆಯುತ್ತವೆ. ಈ ಸ್ಟೋರ್ ತುಂಬ ಸಕ್ಸಸ್ ನೋಡಬೇಕು. ತುಂಬ ಬ್ಯೂಸಿಯಾಗಿರಬೇಕು. 365 ದಿನ ಒಳ್ಳೆ ಬ್ಯುಸಿನೆಸ್ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಬೆಂಗಳೂರಲ್ಲಿ ಇದು ಎರಡನೇ ಸ್ಟೋರ್ ಆಗಿದ್ದು, ಮುಂದಿನ ದಿನಗಳಲ್ಲಿ ನೂರು ಸ್ಟೋರ್ಸ್ ಓಪನ್ ಆಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ : ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ ನಟಿ ರಮ್ಯಾ