ಆಸ್ಟ್ರೇಲಿಯಾ ಕ್ರಿಕೆಟಿಗ ಟಾಮ್ ಮೂಡಿ ಅವರನ್ನು ಸನ್‌ರೈಸರ್ಸ್ ಹೈದ್ರಾಬಾದ್ ಪ್ರಾಂಚೈಸಿ ಮುಖ್ಯ ಕೋಚ್ ಹುದ್ದೆಯಿಂದ ತೆಗೆದು ಹಾಕಿದೆ. ಈ ಸ್ಥಾನಕ್ಕೆ ವೆಸ್ಟ್ ಇಂಡೀಸ್ ಕ್ರಿಕೇಟ್ ತಂಡದ ಬ್ಯಾಟಿಂಗ್ ದಿಗ್ಗಜರಾಗಿ ಗುರುತಿಸಿಕೊಂಡಿದ್ದ ಬ್ರಿಯಾನ್ ಲಾರಾ (Brian Lara) ಅವರನ್ನು ನೇಮಕ ಮಾಡಿದೆ.
ಟಾಮ್ ಮೂಡಿ ಅವರು ಎಸ್‌ಆರ್‌ಎಚ್ ಮುಖ್ಯ ಕೋಚ್ ಆಗಿ 2013 ರಿಂದಲೂ ಕಾರ್ಯನಿರ್ವಹಿಸಿದ್ದರು. 53 ವರ್ಷದ ಲಾರಾ ಅವರು ಇದೇ ಮೊದಲ ಬಾರಿಗೆ ಟಿ20 ಮಾದರಿಯ ತಂಡವೊಂದಕ್ಕೆ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಅವರು, ತಂಡದ ತಾಂತ್ರಿಕ ಸಲಹೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಸ್‌ಆರ್‌ಎಚ್ ಬಳಗ ಸೇರಿಕೊಂಡಿದ್ದರು.
ಇದನ್ನೂ ಓದಿ : ನಟ ಪವನ್ ಕಲ್ಯಾಣ್ಗೆ ಅನಾರೋಗ್ಯ – ಶೀಘ್ರ ಚೇತರಿಕೆಗೆ ಅಭಿಮಾನಿಗಳ ಪ್ರಾರ್ಥನೆ
ಲಾರಾ ನೇಮಕದ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಾಂಚೈಸ್, ‘ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ (Brian Lara) ಅವರು ಐಪಿಎಲ್‌ನ ಮುಂಬರುವ ಟೂರ್ನಿಗಳಿಗೆ ನಮ್ಮ ತಂಡದ ಮುಖ್ಯ ಕೋಚ್ ಆಗಿರಲಿದ್ದಾರೆ’ ಎಂದು ತಿಳಿಸಿದೆ.
ಐಪಿಎಲ್‌ನ ಮುಂದಿನ ಆವೃತ್ತಿಯು ಯುಎಇಯಲ್ಲಿ 2023ರ ಜನವರಿಯಲ್ಲಿ ನಡೆಯಲಿದೆ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ – ಸನ್‌ರೈಸರ್ಸ್ ಹೈದರಾಬಾದ್ ಪಂದ್ಯಕ್ಕೆ ಕೋವಿಡ್ ಕಂಟಕ