200 ಕೋಟಿ ಸುಲಿಗೆ ಪ್ರಕರಣ : ನಟಿ ನೋರಾ ಫತೇಹಿ ವಿಚಾರಣೆ

Nora Fatehi

200 ಕೋಟಿ ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ (Nora fatehi) ಅವರನ್ನು ದೆಹಲಿ ಪೊಲೀಸರು ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಈ ಹಿಂದೆ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಸುಕೇಶ್ ಚಂದಶೇಖರ್ ಮತ್ತು ನೋರಾ ಫತೇಹಿ (Nora fatehi) ಅವರನ್ನು ಒಟ್ಟಿಗೆ ವಿಚಾರಣೆ ನಡೆಸಿತ್ತು. ಈ ವಿಚಾರಣೆಯು ಇ.ಡಿ ಸಲ್ಲಿಸಿರುವ ಚಾರ್ಜ್ ಶೀಟ್‌ನ ಭಾಗವಾಗಿದೆ.

ಫಾರ್ಮಾಸ್ಯುಟಿಕಲ್ ದೈತ್ಯ ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಅದಿತಿ ಸಿಂಗ್ ಮತ್ತು ಶಿವೇಂದರ್ ಸಿಂಗ್ ಅವರಿಂದ ಸುಕೇಶ್ ಚಂದ್ರಶೇಖರ್ ಸುಮಾರು 215 ಕೋಟಿ ರೂ. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಕೆಜಿಎಫ್-2 ನಲ್ಲಿ ಹೆಜ್ಜೆ ಹಾಕ್ತಾರಾ ನೋರಾ ಫತೇಹಿ,

ಈ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸುಕೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪಾಲ್ ಅವರನ್ನು ಮೂರು ದಿನಗಳ ಇ.ಡಿ ರಿಮಾಂಡ್‌ಗೆ ಕಳುಹಿಸಿದೆ. ದೆಹಲಿ ಜೈಲಿನಿಂದ ಸುಲಿಗೆ ದಂಧೆ ನಡೆಸುತ್ತಿದ್ದಕ್ಕಾಗಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.

ನೋರಾ ಪತೇಹಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆರೋಪಿಯಾದ ಸುಖೇಶ್ ಚಂದ್ರಶೇಖರ್​​ ಅವರಿಂದ ಪಡೆದ ಉಡುಗೊರೆ, ಹಣ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ವಿಕ್ರಾಂತ್ ರೋಣ ಬೆಡಗಿ ‘ಜಾಕ್ವೆಲಿನ್ ಫರ್ನಾಂಡಿಸ್​’ರ 7 ಕೋ. ರೂ ವಶ

LEAVE A REPLY

Please enter your comment!
Please enter your name here