ಅವರು ಅರ್ಜುನ ಆದ್ರೆ, ನಾನು ಕರ್ಣ – ಹತಾಶರಾದ್ರಾ ಮುಖ್ಯಮಂತ್ರಿ ಬೊಮ್ಮಾಯಿ?

Basavaraj Bommai
CM Basavaraj Bommai

ಕಾಂಗ್ರೆಸ್​​ನ ಪೇಸಿಎಂ ಪೋಸ್ಟರ್​ ಪ್ರತಿಭಟನೆಯ (Paycm Poster Protest) ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai), ಕಾಂಗ್ರೆಸ್​​ನವರು ಅರ್ಜುನ ಆದ್ರೆ, ನಾನು ಕರ್ಣ ಇದ್ದ ಹಾಗೆ. ಅರ್ಜುನನಿಗೆ ಬಾಣ ಹೊಡೆಯಲು ಹೊಗಳಬೇಕು. ಆದ್ರೆ, ಕರ್ಣನಿಗೆ ಹೊಗಳಿದ್ರೆ ಹಾಗಲ್ಲ. ಆ ಮೂಲಕ ಸಿಎಂ ಬೊಮ್ಮಾಯಿಯವರು ತಮ್ಮನ್ನು ಕರ್ಣನಿಗೆ ಹೋಲಿಸಿಕೊಳ್ಳುವ ಮೂಲಕ ಹತಾಶರಾದ್ರಾ ಎನ್ನುವ ಪ್ರಶ್ನೆ ಮೂಡಿದೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾ ಕಾರಣದಿಂದ 2 ವರ್ಷ ದಸರಾ ಅದ್ದೂರಿ ಆಚರಣೆ ಮಾಡಲು ಆಗಿರಲಿಲ್ಲ. ಈ ಬಾರಿ ಪಾರಂಪಾರಿಕವಾಗಿ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತಿದೆ.ನಾಡಿನ ಜನರು ಮೈಸೂರಿಗೆ ಬಂದು ದಸರಾ ಕಣ್ತುಂಬಿಕೊಂಡು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದರು.

ಕಾಂಗ್ರೆಸ್​ ಸರ್ಕಾರ ಆ ಭಾಗ್ಯ ಈ ಭಾಗ್ಯ ಕೊಟ್ಟು ರಾಜ್ಯಕ್ಕೆ ದೌರ್ಭಾಗ್ಯ ಕೊಟ್ರು. ಇದೇ ಕಾರಣಕ್ಕಾಗಿ ಜನ ಅವರ ಕೈ ಹಿಡಿಯಲಿಲ್ಲ. ಅಲ್ಲಾ ವೇಳೆ ಜನ ಅವರ ಮಾತು ನಂಬಲ್ಲ.ಕೆಲವರು ಅಧಿಕಾರ ಕಳೆದುಕೊಂಡಾಗ ನೀರಿನ ಹೊರಗೆ ಇದ್ದ ಮೀನಿನ‌ಂತೆ ಆಡುತ್ತಾರೆ. ವಾಮ ಮಾರ್ಗದಿಂದ ಕರ್ನಾಟಕದ ಜನರ ಆಶೀರ್ವಾದ ಪಡೆಯಲು ಆಗಲ್ಲ ಎಂದರು. ಇದನ್ನೂ ಓದಿ : ಆರ್​ಎಸ್​ಎಸ್​​ ಕೈಗೊಂಬೆ ಬೊಮ್ಮಾಯಿಗೆ ಈಗ ಅವಮಾನವಂತೆ – ಎಚ್​ಸಿ ಮಹಾದೇವಪ್ಪ ಕಿಡಿ

ಪೇಸಿಎಂ ಪೋಸ್ಟರ್​ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು (Basavaraj Bommai),  ಪೇ ಸಿಎಂ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದುಕೊಳ್ಳುತ್ತೇನೆ. ಆದ್ರೆ ಕೆಲವೊಮ್ಮೆ ಹೇಳಬೇಕು ಅಂದುಕೊಳ್ಳುತ್ತೇನೆ. ಎರಡು ರೀತಿಯ ವರ್ಗಗಳು ಇವೆ. ಒಂದು ಅರ್ಜುನ, ಇನ್ನೊಂದು ಕರ್ಣ. ಅರ್ಜುನನಿಗೆ ಬಾಣ ಹೂಡಲು ಹೊಗಳಬೇಕು. ಕರ್ಣನಿಗೆ ಹೊಗಳಿದ್ರೆ ಆಗಲ್ಲ. ನಿನಗೆ ಆಗಲ್ಲ ಎಂದು ಹೇಳಿದ್ರೆ ನಿಖರವಾಗಿ ಕರ್ಣ ಬಾಣ ಹೊಡೆಯುತ್ತಾನೆ. ನಾನು ಕರ್ಣನ ಪಂಥಿಗೆ ಸೇರಿದವನು ಹೇಳಿದ್ದಾರೆ. ಆ ಮೂಲಕ ಬೊಮ್ಮಾಯಿಯವರು ಕಾಂಗ್ರೆಸ್​​ನವರ ಪ್ರತಿಭಟನೆಯಿಂದ ಹತಾಶರಾದ್ರಾ ಎನ್ನುವ ಪ್ರಶ್ನೆಗಳು ಮೂಡುತ್ತಿವೆ.

ಕಾಂಗ್ರೆಸ್​​ ಬಗ್ಗೆ ಹರಿಹಾಯ್ದಿರುವ ಅವರು, ನೀವು ಎಷ್ಟು ಅವಮಾನ, ಟೀಕೆ ಮಾಡ್ತೀರಾ ಮಾಡಿ. ಅದನ್ನು ನಾನು ಸವಾಲಾಗಿ ತೆಗೆದುಕೊಂಡು ಕೆಲಸ ಮಾಡುತ್ತಾನೆ. ಜನರ ವಿಶ್ವಾಸವನ್ನು ಗಳಿಕೆ ಮಾಡುತ್ತೇನೆ. ಮತ್ತೆ ರಾಜ್ಯದಲ್ಲಿ ನಾನು ಜನ ಪರ ಸರ್ಕಾರವನ್ನು ಸ್ಥಾಪಿಸುತ್ತೇನೆ. ಬೆಂಗಳೂರಿನಲ್ಲಿ ನಿನ್ನೆ ಯಾವ ಸ್ಥಳದಲ್ಲಿ ಇದ್ರಿ ಅದೇ ಸ್ಥಳದಲ್ಲಿ ನಿಲ್ಲಿಸುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : Paycm Poster Protest : ಕಾಂಗ್ರೆಸ್ನಿಂದ ಪೇಸಿಎಂ ಪೋಸ್ಟರ್ ಅಂಟಿಸಿ ಪ್ರತಿಭಟನೆ – ಬಂಧನ