ಗ್ಯಾನವಾಪಿ ಮಸೀದಿ – ಇವತ್ತು ಏನು ಹೊರಬೀಳಬಹುದು ಆದೇಶ..?

ಉತ್ತರಪ್ರದೇಶ (Uttarpradesh) ರಾಜ್ಯದಲ್ಲಿರುವ ಗ್ಯಾನವಾಪಿ (Gyanvapi) ಮಸೀದಿ ವಿವಾದ ಬಗ್ಗೆ ಇವತ್ತು ವಾರಾಣಸಿ (Varanasi) ನ್ಯಾಯಾಲಯ ಇವತ್ತು ತನ್ನ ಆದೇಶ ಪ್ರಕಟಿಸಲಿದೆ.
ಮಸೀದಿಯೊಳಗಡೆ ಪೂಜೆ, ಪ್ರಾರ್ಥನೆಗೆ ಅವಕಾಶ ನೀಡುವಂತೆ ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿ ಸ್ವೀಕಾರಯೋಗ್ಯವೇ ಎಂಬ ಬಗ್ಗೆ ಇವತ್ತು ವಾರಾಣಸಿ ಜಿಲ್ಲಾ ನ್ಯಾಯಾಧೀಶ ಎ ಕೆ ಶ್ರೀವಾತ್ಸವ ಅವರು ಆದೇಶ ನೀಡಲಿದ್ದಾರೆ.
ಮಸೀದಿ ಈ ಹಿಂದೆ ಶಿವ ದೇವಸ್ಥಾನವಾಗಿತ್ತು ಎಂದು ಐವರು ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿ ಆಧರಿಸಿ ವಾರಣಾಸಿಯ ಕೆಳ ಹಂತದ ನ್ಯಾಯಾಲಯ ಮಸೀದಿಯಲ್ಲಿ ಸಮೀಕ್ಷೆಗೆ ಸೂಚಿಸಿತ್ತು.
ಆದರೆ ಇದೇ ವರ್ಷದ ಮೇನಲ್ಲಿ ಸುಪ್ರೀಂಕೋರ್ಟ್ (Supreme Court)​​ ಪ್ರಕರಣವನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿತ್ತು.
ವಾರಣಾಸಿ ಸಿವಿಲ್​ ನ್ಯಾಯಾಧೀಶರ ಎದುರು ಇರುವ ಪ್ರಕರಣವನ್ನು ವಾರಣಾಸಿಯ (Varanasi) ಅನುಭವಸ್ಥ ಮತ್ತು ಹಿರಿಯ ನ್ಯಾಯಾಂಗ ಅಧಿಕಾರಿ ವಿಚಾರಣೆ ನಡೆಸಲಿ ಎಂದು ಹೇಳಿ ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
ಇದಕ್ಕೂ ಮೊದಲು ವಾರಣಾಸಿಯ ಕೆಳಹಂತದ ಸಿವಿಲ್​ ನ್ಯಾಯಾಲಯ (Civil Court) ಐವರು ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿ ಆಧರಿಸಿ ಗ್ಯಾನವಾಪಿ ಮಸೀದಿಯ ಸಮೀಕ್ಷೆಗೆ ಆದೇಶಿಸಿತ್ತು.
ಮಸೀದಿ ಸಂಕೀರ್ಣದಲ್ಲಿ ಹಿಂದೂ ದೇವರು ಮತ್ತು ದೇವತಗೆಗಳ ಮೂರ್ತಿಗಳಿವೆ, ಹೀಗಾಗಿ ಪೂಜೆಗೆ ಅವಕಾಶ ಇದೆ ಎಂದು ಅರ್ಜಿ ಸಲ್ಲಿಸಿದ್ದರು.
ಆ ಬಳಿಕ ಸಿವಿಲ್​ ಕೋರ್ಟ್​​ ಮಸೀದಿಯ ಸಮೀಕ್ಷೆಗೆ ಕಮಿಷನರ್​ ನೇಮಿಸಿತ್ತು. ಸಮೀಕ್ಷೆ ನಡೆಸಿದ್ದ ಕಮಿಷನರ್​ ಮಸೀದಿ ಸಂಕೀರ್ಣದಲ್ಲಿರುವ ಕೊಳದಲ್ಲಿ ಶಿವಲಿಂಗ ಇದೆ ಎಂದು ವರದಿ ನೀಡಿದೆ ಎಂದು ವರದಿ ಆಗಿತ್ತು.
ಮಸೀದಿಯ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆ ಆಗಿದೆ ಎನ್ನಲಾಗಿದ್ದ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿ ನ್ಯಾಯಾಲಯ ಆದೇಶಿಸಿತ್ತು.
ವಾರಣಾಸಿಯ ಕೆಳಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಸೀದಿ ಸಮಿತಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.
1947ರಲ್ಲಿ ಜಾರಿ ಆದ ಪೂಜಾ ಸ್ಥಳ ಕಾಯ್ದೆಯ ಪ್ರಕಾರ ಪೂಜಾ ಸ್ಥಳಗಳ ಸ್ವರೂಪದಲ್ಲಿ ಬದಲಾವಣೆ ಮಾಡುವಂತಿಲ್ಲ ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಮಸೀದಿ ಸಮೀಕ್ಷೆ ಆದೇಶ ಮತ್ತು ಮಸೀದಿಯೊಳಗೆ ಶಿವಲಿಂಗ ಪತ್ತೆ ಆಗಿದೆ ಎನ್ನಲಾಗಿರುವ ಪ್ರದೇಶಕ್ಕೆ ನಿರ್ಬಂಧ ಹೇರುವ ಮೂಲಕ ಉಲ್ಲಂಘಿಸಲಾಗಿದೆ ಎಂದು ಸುಪ್ರೀಂಕೋರ್ಟ್​ನಲ್ಲಿ ಮಸೀದಿ ಸಮಿತಿ ವಾದಿಸಿತ್ತು.

LEAVE A REPLY

Please enter your comment!
Please enter your name here