ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ (75th Independence Day 2022) ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಎಲ್ಲ ಟೆಲಿಕಾಂ ಕಂಪನಿಗಳು ತಮ್ಮ ಕಾಲರ್ ಟ್ಯೂನ್ (Caller Tune) ಬದಲಾಯಿಸಿವೆ.
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜದ ಜೊತೆಗೆ ಸೆಲ್ಫಿ (Selfie) ತೆಗೆದು ಹರ್ಘರ್ತಿರಂಗಾ.ಕಾಮ್ (Har Ghar Tiranga ) ವೆಬ್ಸೈಟ್ನಲ್ಲಿ ಹಂಚಿಕೊಳ್ಳುವಂತೆ ಕಾಲರ್ ಟ್ಯೂನ್ನಲ್ಲಿ ಹೇಳಲಾಗಿದೆ.
ಆಗಸ್ಟ್ 13ರಿಂದ ಆಗಸ್ಟ್ 15ರ ನಡುವೆ 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ (Flag) ಹಾರಿಸುವ ಅಭಿಯಾನವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಕೈಗೊಂಡಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಮಾಹಿತಿ ಪ್ರಕಾರ ಇದುವರೆಗೆ ವೆಬ್ಸೈಟ್ನಲ್ಲಿ 4.2 ಕೋಟಿ ಸೆಲ್ಫಿಯನ್ನು ಕ್ಲಿಕ್ಕಿಸಿ ಸಚಿವಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ADVERTISEMENT
ADVERTISEMENT