Independence Day: ಬಾಹ್ಯಾಕಾಶದಲ್ಲಿ ಹಾರಿದ ಭಾರತದ ತ್ರಿವರ್ಣ ಧ್ವಜ

ಇವತ್ತು ಭವ್ಯ ಭಾರತಕ್ಕೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಬಾಹ್ಯಾಕಾಶದಲ್ಲೂ (Space) ಭಾರತದ ತ್ರಿವರ್ಣ ಧ್ವಜ (Indian Flag) ಹಾರಿದೆ.
ಸ್ಪೇಸ್​ ಕಿಡ್ಸ್​ ಇಂಡಿಯಾ (Space Kidz India) ಎಂಬ ಚೆನ್ನೈ (Chennai) ಮೂಲದ ಬಾಹ್ಯಾಕಾಶ ಸಂಘಟನೆ 30 ಕಿಲೋ ಮೀಟರ್​ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ.
ಈ ಬಗ್ಗೆ ಸ್ಪೇಸ್​ ಕಿಡ್ಸ್​ ಇಂಡಿಯಾ ವೀಡಿಯೋ ಹಂಚಿಕೊಂಡಿದೆ.
ಸ್ಪೇಸ್​ ಕಿಡ್ಸ್​ ಇಂಡಿಯಾ ಇತ್ತೀಚೆಗೆ 750 ವಿದ್ಯಾರ್ಥಿಗಳೇ ನಿರ್ಮಿಸಿದ್ದ ಆಜಾದಿಸ್ಯಾಟ್​ಲೈಟ್​ನ್ನು ಇಸ್ರೋದ (ISRO) ಹೊಸ ಉಪಗ್ರಹ ನೌಕೆ ಮೂಲಕ ಉಡಾಯಿಸಿತ್ತು. ಆದರೆ ಆ ಉಪಗ್ರಹ ಕಕ್ಷೆ (Orbit) ಸೇರಿರಲಿಲ್ಲ.
ಇತ್ತ ಭಾರತ ಮೂಲದ ಅಮೆರಿಕದ ಬಾಹ್ಯಾಕಾಶ ವಿಜ್ಞಾನಿ ರಾಜಾಚಾರಿ (Astronaut Raja Chari)  ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ.

Astronaut Raja Chari

ಈ ಬಗ್ಗೆ ಅವರು ಟ್ವೀಟಿಸಿದ್ದಾರೆ. ತಮ್ಮ ಪೂರ್ವಜರ ಊರು ಹೈದ್ರಾಬಾದ್ (Hyderbad)​ ನಕಾಶೆಯನ್ನೂ ಹಂಚಿಕೊಂಡಿದ್ದಾರೆ.

Astronaut Raja Chari

LEAVE A REPLY

Please enter your comment!
Please enter your name here